ಪತಿ ಸಾವಿನ ನಂತ್ರ ಟಿವಿ ಚಾನೆಲ್ ಗೆ ಬಂದು, ಹಂತಕರನ್ನು ಹಿಡಿಯುವಂತೆ ಸದಾ ಒತ್ತಾಯಿಸುತ್ತಿದ್ದ ಮಹಿಳೆಯೊಬ್ಬಳ ಬಣ್ಣ ಬಯಲಾಗಿದೆ. ಒಂದು ವರ್ಷದ ನಂತ್ರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಪತಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಘಟನೆ ಅಮೆರಿಕಾದಲ್ಲಿ ನಡೆದಿದೆ. ಹಿಂದಿನ ವರ್ಷ ಅಕ್ಟೋಬರ್ ನಲ್ಲಿ ಜೆನ್ನಿಫರ್ ಪತಿಯ ಕೊಲೆಯಾಗಿತ್ತು. ಕೊಲೆ ನಂತ್ರ, ಟಿವಿ ಚಾನೆಲ್ ಗೆ ಅನೇಕ ಸಾರಿ ಬಂದಿದ್ದ ಮಹಿಳೆ, ಹಂತಕರನ್ನು ಹಿಡಿಯುವಂತೆ ಒತ್ತಾಯಿಸಿದ್ದಳು. ಆದ್ರೀಗ ಆಕೆಯೇ ಜೈಲು ಸೇರುವಂತಾಗಿದೆ. ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಪತಿ ಹತ್ಯೆ ಮಾಡಿದ ಆರೋಪ ಜೆನ್ನಿಫರ್ ಮೇಲೆ ಬಂದಿದೆ.
ಜೆನ್ನಿಫರ್ ಹಾಗೂ ಆಕೆ ಪತಿ, ನಾಯಿ ಜೊತೆ ವಾಕಿಂಗ್ ಗೆ ಹೋಗಿದ್ದರು. ಈ ವೇಳೆ ಜೆನ್ನಿಫರ್ ಬಾಯ್ ಫ್ರೆಂಡ್, ದಾಳಿ ನಡೆಸಿ ಆಕೆ ಪತಿಯ ಹತ್ಯೆ ಮಾಡಿದ್ದ. ಇಬ್ಬರು ಪ್ಲಾನ್ ಮಾಡಿ ಹತ್ಯೆ ಮಾಡಿದ್ದರು. ನಂತ್ರ ಅಳುವ ನಾಟಕವಾಡಿದ್ದಳು ಜೆನ್ನಿಫರ್. ತನ್ನ ಪತಿ ತನಗೆ ಹಿಂಸೆ ನೀಡ್ತಾನೆಂದು ಬಾಯ್ ಫ್ರೆಂಡ್ ಗೆ ಹೇಳಿದ್ದ ಜೆನ್ನಿಫರ್, ಪ್ರೇಮಿ ಎಷ್ಟು ಪೊಸೆಸಿವ್ ಎಂಬುದನ್ನು ನೋಡುವ ಉದ್ದೇಶ ಹೊಂದಿದ್ದಳಂತೆ.
ಒಂದು ವರ್ಷದ ನಂತ್ರ ಪೊಲೀಸರು, ಜೆನ್ನಿಫರ್ ಫೋನ್ ಮಾಹಿತಿ ಆಧಾರದ ಮೇಲೆ ಆಕೆಯನ್ನು ಬಂಧಿಸಿದ್ದಾರೆ. ಜೆನ್ನಿಫರ್, ತಾನು ತಪ್ಪು ಮಾಡಿಲ್ಲ. ಪೊಲೀಸರು ಸುಳ್ಳು ಆರೋಪ ಮಾಡ್ತಿದ್ದಾರೆಂದು ದೂರಿದ್ದಾಳೆ.