
ಕಳೆದೆರಡು ವಾರಗಳಿಂದ ಉದ್ಯೋಗ ಮಾರುಕಟ್ಟೆಯು ತೀವ್ರವಾಗಿ ಬದಲಾಗಿದೆ. ದಿಗ್ಗಜರ ಕಂಪನಿಗಳು ಉದ್ಯೋಗಿಗಳನ್ನು ಸಾಲು ಸಾಲಾಗಿ ಮನೆಗೆ ಕಳಿಸುತ್ತಿವೆ. ಕೆಲಸ ಕಳೆದುಕೊಂಡವರು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಈ ನಡುವೆ ಕೆಲಸ ಕಳೆದುಕೊಂಡ ಮಹಿಳೆ ಕೆಲವೇ ದಿನಗಳಲ್ಲಿ ಮತ್ತೆ ಕೆಲಸಕ್ಕೆ ಅತಿ ಹೆಚ್ಚು ಸಂಬಳದೊಂದಿಗೆ ಸೇರಿಕೊಂಡಿದ್ದಾರೆ. ಈ ಬಗ್ಗೆ ಆಕೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ.
“ಮಂಗಳವಾರ ನನ್ನನ್ನು ವಜಾ ಮಾಡಲಾಯಿತು. ಶುಕ್ರವಾರ ನನಗೆ 50% ಹೆಚ್ಚು, WFH ಆಯ್ಕೆ ಮತ್ತು ಹೆಚ್ಚಿನ PTO ಪಾವತಿಸುವ ಉದ್ಯೋಗದ ಪ್ರಸ್ತಾಪವನ್ನು ನಾನು ಪಡೆದುಕೊಂಡಿದ್ದೇನೆ” ಎಂದು ಆಕೆ ಪೋಸ್ಟ್ ಮಾಡಿದ್ದಾರೆ.
“ಇದು ಯಾವಾಗಲೂ ನಿಮ್ಮನ್ನು ಬೆಂಬಲಿಸಲು ಒಂದು ಜ್ಞಾಪನೆಯಾಗಿದೆ. ಇತರರ ಅಭಿಪ್ರಾಯಗಳು ನೀವು ಯಾರೆಂದು ಅಥವಾ ಆಗಿರಬೇಕು ಎಂದು ಪ್ರಶ್ನಿಸಲು ಎಂದಿಗೂ ಬಿಡಬೇಡಿ” ಎಂದು ಟ್ವಿಟರ್ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲಸ ಕಳೆದುಕೊಂಡವರು ನಿರಾಶರಾಗಬಾರದೆಂಬುದನ್ನ ಪೋಸ್ಟ್ ಹೇಳುತ್ತಿದೆ.