ಕೊರೋನಾ ಸಾಂಕ್ರಾಮಿಕದಿಂದಾಗಿ ಜಗತ್ತಿನ ಅನೇಕ ದೇಶಗಳು ಲಾಕ್ ಡೌನ್ ಘೋಷಿಸಿದ್ದವು. ಆದರೆ ಪಶುವೈದ್ಯರೊಬ್ಬರ ಬಾಸ್ ಕೋವಿಡ್ ಅಂತಹ ದೊಡ್ಡ ವಿಷಯವಲ್ಲ ಎಂದು ಹೇಳಿ ಕೆಲಸಕ್ಕೆ ಬರುವಂತೆ ಆದೇಶಿಸಿದ್ದರು. ಆದರೆ ವೈದ್ಯೆ ನಿರಾಕರಿಸಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ್ದರು. ಇದೀಗ ಪಶುವೈದ್ಯೆಗೆ ನ್ಯಾಯ ದೊರೆತಿದೆ.
Shocking: ರೋಗಿಗಳಿಗೆ ಫುಟ್‌ಪಾತ್ ನಲ್ಲಿ ಚಿಕಿತ್ಸೆ…!
ಮಿಲನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಪಶುವೈದ್ಯ ರೆಂಡಿನಾ ಆತಂಕಕ್ಕೊಳಗಾಗಿದ್ದರು. ಮಾರ್ಚ್ ತಿಂಗಳಲ್ಲಿ ಯುಕೆನಲ್ಲಿ ಲಾಕ್ಡೌನ್ ಘೋಷಿಸಿದಾಗ ಜನರ ಕಾಳಜಿಯ ಬಗ್ಗೆಯೂ ಹೆಚ್ಚು ಚಿಂತಿತರಾಗಿದ್ದರು.
ಸ್ವತಃ ಪ್ರಧಾನಿಯೇ ಲಾಕ್ಡೌನ್ ಘೋಷಿಸಿದ್ರೂ, ಈಕೆಯ ಬಾಸ್ ಮಾತ್ರ ಇವೆಲ್ಲಾ ಏನೂ ಇಲ್ಲ, ಕೆಲಸಕ್ಕೆ ಹಾಜರಾಗಬೇಕೆಂದು ಉದ್ಯೋಗಿಗಳಿಗೆ ಕಟ್ಟಪ್ಪಣೆ ಮಾಡಿದ್ದರು. ಆದರೆ ತಾನು ಕೆಲಸಕ್ಕೆ ಬರುವುದಿಲ್ಲ ಎಂದು ಪಶುವೈದ್ಯೆ ರೆಂಡಿನಾ ಬಾಸ್ ಸವಾಲು ಹಾಕಿದ್ದರು.
BIG NEWS: ಸುದೀರ್ಘ ಅವಧಿಗೆ ಅಡಳಿತ ನಡೆಸಿದ ಮೊದಲ ನಾಯಕ ಮೋದಿ ಅಧಿಕಾರಕ್ಕೇರಿ ಇಂದಿಗೆ 20 ವರ್ಷ
ಬಾಸ್ ಡಾ. ವೈಟ್ ಜೊತೆ ಮುಖಾಮುಖಿಯಾದ ನಂತರ, ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಯಿತು. ಉದ್ಯೋಗ ನ್ಯಾಯಮಂಡಳಿ ಈಗ ಆಕೆಯ ವಜಾ ಪ್ರಕರಣವನ್ನು ಆಲಿಸಿದೆ ಮತ್ತು ಅದನ್ನು ಅನ್ಯಾಯ ಎಂದು ಘೋಷಿಸಿದೆ. ಸಹಾಯಕ ಪಶುವೈದ್ಯ ಶಸ್ತ್ರಚಿಕಿತ್ಸಕಿ ರೆಂಡಿನಾಗೆ ಡಾ. ವೈಟ್ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.