ತಮ್ಮ ದನಿಯಲ್ಲಿರುವ ಮಾಹಿತಿಗಳಿರುವ 3,500ಕ್ಕೂ ಹೆಚ್ಚಿನ ಫೈಲ್‌ಗಳು ಅಮೆಜ಼ಾನ್ ಡಿವೈಸ್‌ಗಳ ದತ್ತಾಂಶದಲ್ಲಿರುವುದನ್ನು ಕಂಡ ಮಹಿಳೆಯೊಬ್ಬರು ಟಿಕ್ ಟಾಕ್ ವಿಡಿಯೋವೊಂದರಲ್ಲಿ ಈ ಸಂಬಂಧ ಶಾಕ್ ವ್ಯಕ್ತಪಡಿಸಿದ್ದಾರೆ.
ತಮ್ಮ ಮನೆಯಲ್ಲಿ ಅಮೆಜ಼ಾನ್ ನ ಮೂರು ಡಿವೈಸ್ ಗಳಿದ್ದು, ಇದರಲ್ಲಿ ಎರಡು ಎಕೋ ಡಾಟ್ ಸ್ಪೀಕರ್‌ಗಳು ಹಾಗೂ ಮನೆಯಲ್ಲಿರುವ ಸ್ಮಾರ್ಟ್ ಲೈಟ್ ಬಲ್ಬ್‌ಗಳ ನಿಯಂತ್ರಣಕ್ಕಾಗಿ ಒಂದು ಎಕೋ ಡಿವೈಸ್ ಇದೆ.
BREAKING: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ
ತಮ್ಮ ಡಿವೈಸ್‌ಗಳಲ್ಲಿ ಸಂಗ್ರಹವಾದ ಎಲ್ಲಾ ದತ್ತಾಂಶವನ್ನು ನೀಡುವಂತೆ ಅಮೆಜ಼ಾನ್‌ನಲ್ಲಿ ಕೇಳಿಕೊಂಡ ಮಹಿಳೆಗೆ ಈ ಸಂಗತಿ ತಿಳಿದು ಬೆಕ್ಕಸಬೆರಗಾಗಿದೆ. ಈ ದತ್ತಾಂಶದಲ್ಲಿ ಬರೀ ದನಿಯ ಫೈಲ್‌ಗಳು ಮಾತ್ರವಲ್ಲದೇ ತಮ್ಮ ವೈಯಕ್ತಿಕ ಸಂಪರ್ಕಗಳ ಮಾಹಿತಿಯೂ ಕಂಡು ಬಂದಿರುವ ವಿಚಾರವನ್ನು ಟಿಕ್‌ಟಾನ್‌ನಲ್ಲಿ ಶೇರ್ ಮಾಡಿಕೊಂಡ ಕ್ಲಿಪ್‌ನಲ್ಲಿ ಮಹಿಳೆ ತಿಳಿಸಿದ್ದಾರೆ.
ಅಮೆಜ಼ಾನ್‌ನ ಯಾವುದೇ ಡಿವೈಸ್ ಜೊತೆಗೆ ತಮ್ಮ ಸಂಪರ್ಕದ ವಿವರಗಳನ್ನು ಸಿಂಕ್ ಮಾಡಿಲ್ಲವೆಂದು ಈ ಮಹಿಳೆ ಹೇಳುತ್ತಾರಾದರೂ, ತನ್ನ ಎಕೋ ಡಿವೈಸ್‌ಗಳ ಬಳಕೆಗೂ ಮುನ್ನ ಸಂಪರ್ಕಗಳ ಸಿಂಕ್ ಮಾಡಲು ಅಮೆಜ಼ಾನ್ ಒತ್ತಿ ಕೇಳುತ್ತದೆ.
ಈ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಅಮೆಜ಼ಾನ್, ತನ್ನ ಡಿವೈಸ್‌ಗಳಲ್ಲಿರುವ ಮಾಹಿತಿಯನ್ನು ನಿಯಂತ್ರಿಸುವ ಸಾಧ್ಯತೆಯನ್ನು ಗ್ರಾಹಕರಿಗೆ ಕೊಟ್ಟಿರುವುದಾಗಿ ತಿಳಿಸಿದೆ.