ಕೆಲವೊಮ್ಮೆ ನೀವು ಆರ್ಡರ್ ಮಾಡಿದ ಪಾರ್ಸೆಲ್ ಬರದೇ ತುಂಬಾ ತಡವಾಗಬಹುದು. ಅಥವಾ ನೀವು ಆರ್ಡರ್ ಮಾಡಿದ ವಸ್ತು ಬದಲಾಗಿ ಬೇರೆ ವಸ್ತು ನಿಮ್ಮ ಕೈಸೇರಬಹುದು. ಇಂತಹ ಸಂದರ್ಭಗಳಲ್ಲಿ ಕಂಪನಿಗಳಿಗೆ ನಿಮ್ಮ ಪಾರ್ಸಲ್ ಹಿಂತಿರುಗಿಸಿ ಮರುಪಾವತಿ ಪಡೆಯಬಹುದು.
ಆದರೆ ಸೌತ್ ವೇಲ್ಸ್ ಮಹಿಳೆಯೊಬ್ಬರ ಪರಿಸ್ಥಿತಿ ವಿಭಿನ್ನವಾಗಿತ್ತು . ಏಕೆಂದರೆ ಅವರು ತಮ್ಮ ಪಾರ್ಸೆಲ್ ಅನ್ನು ಎರಡು ವರ್ಷಗಳ ನಂತರ ಪಡೆದುಕೊಂಡಿದ್ದಾರೆ, ಅದೂ ಕೂಡ ಕೆಟ್ಟ ಸ್ಥಿತಿಯಲ್ಲಿ.
30 ವರ್ಷದ ಮೆಗ್ ಜಾನ್ಸನ್ ತನ್ನ ಗಾರ್ಡನ್ ನಲ್ಲಿ ಪಾರ್ಸೆಲ್ ಅನ್ನು ಕಂಡು ಆಘಾತಕ್ಕೊಳಗಾಗಿದ್ದಳು. ಅವರು ಆರ್ಡರ್ ಮಾಡಿದ್ದ 2 ವರ್ಷದ ನಂತರ ಪಾರ್ಸೆಲ್ ಕಂಡಿದೆ. ಪಾರ್ಸೆಲ್ ಅನ್ನು 2022 ರಲ್ಲಿ ತಲುಪಿಸಲಾಗಿದೆ ಎಂದು ತಿಳಿಸಿದ್ದರೂ, ಆ ಸಮಯದಲ್ಲಿ ಆಕೆಗೆ ಪಾರ್ಸೆಲ್ ಬಂದಿರುವ ಕುರುಹು ಸಹ ಸಿಕ್ಕಿರಲಿಲ್ಲ.
ಇದೀಗ ಗಾರ್ಡನ್ ನಲ್ಲಿ ಕಂಡ ಪಾರ್ಸೆಲ್ ಚಿತ್ರವನ್ನು ಮೆಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪಾರ್ಸೆಲ್ ನಲ್ಲಿರುವುದು ಬಟ್ಟೆಯಂತೆ ಕಂಡರೂ ಅದು ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದು ಕೊಳೆಯುತಲಿತ್ತು.
2022 ರಲ್ಲೇ ಮೆಗ್ ಪಾರ್ಸೆಲ್ ತಲುಪದಿರುವ ಬಗ್ಗೆ ಕೊರಿಯರ್ ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿದ್ದರು. ಆದರೆ ನಿಮ್ಮ ಪಾರ್ಸೆಲ್ ವಿತರಿಸಲಾಗಿದೆ ಎಂದು ತೋರಿಸುತ್ತಿದೆ. ಆದರೆ ಈ ಸಮಸ್ಯೆ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿ ಕಂಪನಿಯ ವಕ್ತಾರರು ಕ್ಷಮೆಯಾಚಿಸಿದ್ದಾಗಿ ಹೇಳಿದ್ದಾರೆ.