alex Certify ಶಾಕಿಂಗ್…! ಗಂಡನ ಸಾಯುವ ಕ್ಷಣ ಸೆರೆಹಿಡಿದ ಪತ್ನಿ -ಪತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ವಿಡಿಯೋ ಮಾಡಿದ್ಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! ಗಂಡನ ಸಾಯುವ ಕ್ಷಣ ಸೆರೆಹಿಡಿದ ಪತ್ನಿ -ಪತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ವಿಡಿಯೋ ಮಾಡಿದ್ಲು

ಹೌರಾ: ಪಶ್ಚಿಮಬಂಗಾಳದಲ್ಲಿ ತನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಪತ್ನಿ ವಿಡಿಯೋ ಮಾಡಿಕೊಂಡಿದ್ದಾಳೆ. ತನ್ನ ಗಂಡ ಸಾಯುವ ಕೊನೆಯ ಕ್ಷಣವನ್ನು ಮೊಬೈಲ್ನಲ್ಲಿ ಸೆರೆಹಿಡಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆಕೆ ತಡೆಯಲು ಹೋಗದೇ ವಿಡಿಯೋ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಳು ಎಂದು ಆರೋಪಿಸಲಾಗಿದೆ.

22 ವರ್ಷದ ನೇಹಾ ಶುಕ್ಲಾ ಹೀಗೆ ವಿಡಿಯೋ ಮಾಡಿಕೊಂಡ ಮಹಿಳೆ. ಕಳೆದ ವರ್ಷ ಡಿಸೆಂಬರ್ 11 ರಂದು 4 ತಿಂಗಳ ಹಿಂದೆ ಅಮೋನ್ ಶಾ ಜೊತೆಗೆ ನೇಹಾ ಮದುವೆಯಾಗಿತ್ತು. ಇವರ ಮದುವೆಯ ಬಳಿಕ ದಂಪತಿ ಕೆಲಸ ತೊರೆದಿದ್ದು, ಅಮೋಲ್ ಬ್ಯುಸಿನೆಸ್ ಆರಂಭಿಸಿದ್ದರು. ದೆಹಲಿ ಪ್ರವಾಸದ ನಂತರ ದಂಪತಿಗೆ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

ಅಮೋಲ್ ಸಹೋದರಿ ಬರ್ಖಾ ಪ್ರಸಾದ್ ಆರೋಪಿಸಿರುವಂತೆ, ಅಮೋನ್ ಪತ್ನಿಯೊಂದಿಗೆ ಇರಲು ಬಯಸಿದ್ದರೂ, ನೇಹಾ ಗಂಡನೊಂದಿಗೆ ಇರಲು ನಿರಾಕರಿಸಿದ್ದಳು. ಆಕೆ ಏನೋ ವಿಷಯ ಮುಚ್ಚಿಡುತ್ತಿದ್ದಾಳೆ ಎಂದು ಹೇಳಲಾಗಿದೆ.

ಏಪ್ರಿಲ್ 5 ರಂದು ಕೊಲ್ಕತ್ತಾಗೆ ಬಂದ ನೇಹಾ ಗಂಡನಿಂದ ವಿಚ್ಛೇದನ ಕೇಳಿದ್ದಾಳೆ. ಇದೇ ವಿಚಾರಕ್ಕೆ ಗಲಾಟೆ ಆಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ದೃಶ್ಯವನ್ನು ನೇಹಾ ವಿಡಿಯೋ ಮಾಡಿಕೊಂಡಿದ್ದಾಳೆ. ಆಕೆಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಗಂಡ ಹೆದಸರಿಸಲು ಈ ರೀತಿ ಮಾಡುತ್ತಿರಬಹುದು. ಆತ ಹಲವು ಸಲ ಈ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಟಕವಾಡಿದ್ದ ಎಂದು ಪೋಲೀಸರ ವಿಚಾರಣೆ ವೇಳೆ ನೇಹಾ ಹೇಳಿಕೆ ನೀಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...