ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ವಿಭಿನ್ನ ಪ್ರಕರಣದ ಅರ್ಜಿಯೊಂದು ಗಮನ ಸೆಳೆದಿದೆ. ಜೈಲಿನಲ್ಲಿರುವ ಕೈದಿ ಪತ್ನಿಯೊಬ್ಬರು ಕೋರ್ಟ್ ನಲ್ಲಿ ವಂಶಾಭಿವೃದ್ಧಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದಾರೆ.
ಜೈಲಿನಲ್ಲಿರುವ ಪತಿ ಜೊತೆ ಸಂಬಂಧ ಬೆಳೆಸಿ, ವಂಶಾಭಿವೃದ್ಧಿ ಗೆ ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಹರ್ಯಾಣ ಸರ್ಕಾರದ ಅಭಿಪ್ರಾಯ ಕೇಳಿದೆ.
ಅರ್ಜಿ ಸಲ್ಲಿಸುವ ವೇಳೆ ಪತ್ನಿ ತನ್ನ ಪತಿ ಜೈಲಿನಲ್ಲಿರುವುದಾಗಿ ಹೇಳಿದ್ದಾರೆ. ಕೊಲೆ ಪ್ರಕರಣದಲ್ಲಿ ಪತಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದಿದ್ದಾರೆ. ಪತಿ ಆಗಸ್ಟ್ 28, 2018 ರಿಂದ ಗುರುಗ್ರಾಮ್‌ನ ಭೋಂಡ್ಸಿ ಜೈಲಿನಲ್ಲಿದ್ದಾನೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸಂತಾನೋತ್ಪತ್ತಿ ಅಧಿಕಾರವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲವೆಂದು ಅರ್ಜಿಯಲ್ಲಿ ಹೇಳಲಾಗಿದೆ.
ಹೈಕೋರ್ಟ್, ವಿಚಾರಣೆ ವೇಳೆ ಸರ್ಕಾರದ ಅಭಿಪ್ರಾಯ ಹೇಳಿದೆ. ಇದಕ್ಕೆ ಸರ್ಕಾರದ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಇಲಾಖೆಯ ಎಸಿಎಸ್ ಅಭಿಪ್ರಾಯದ ನಂತರವೇ ಈ ವಿಷಯದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹರ್ಯಾಣ ಸರ್ಕಾರ ಹೇಳಿದೆ. ಮುಂದಿನ ವಿಚಾರಣೆಯಲ್ಲಿ ಹರ್ಯಾಣ ಸರ್ಕಾರ ತನ್ನ ಅಭಿಪ್ರಾಯ ಹೇಳುವ ಸಾಧ್ಯತೆಯಿದೆ. ಜನವರಿ 27 ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ. ಆಗ ಸರ್ಕಾರ ಏನು ಹೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ.