ಜಿಮ್ ನಲ್ಲಿ ಒಬ್ಬಂಟಿಯಾಗಿ ಕಸರತ್ತು ಮಾಡುತ್ತಿದ್ದ ಯುವತಿಯನ್ನು ಕೆಣಕಲು ಹೋಗಿ ಆರೋಪಿಯೊಬ್ಬ ಹಿಗ್ಗಾಮುಗ್ಗಾ ಇಕ್ಕಿಸಿಕೊಂಡಿದ್ದಾನೆ. ಇಂತಹದೊಂದು ಘಟನೆ ಅಮೆರಿಕಾದ ಫ್ಲೋರಿಡಾ ಹಿಲ್ಸ್ ಬರ್ಗ್ ಕೌಂಟಿಯಲ್ಲಿ ನಡೆದಿದೆ.
ಈ ವೇಳೆ ಒಳ ಪ್ರವೇಶಿಸಿದ ಆರೋಪಿ ಆಕೆಯಿಂದ ಹಣ, ಆಭರಣ ದೋಚಲು ಯತ್ನಿಸಿದ್ದಾನೆ. ಸುಮ್ಮನೆ ಹೊರಗೆ ಹೋಗು ಎಂದು ಯುವತಿ ಹೇಳಿದರೂ ಸಹ 22 ವರ್ಷದ ಕ್ಸೇವಿಯರ್ ಥಾಮಸ್ ಜೋನ್ಸ್ ಎಂಬ ಆರೋಪಿ ಆಕೆ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಆದರೆ ತನ್ನ ಜಿಮ್ ಪಟ್ಟುಗಳನ್ನು ಬಳಸಿದ ಯುವತಿ ಆತನನ್ನು ಮಣಿಸಿದ್ದಲ್ಲದೆ ಇದೇ ಸಂದರ್ಭದಲ್ಲಿ ಪೊಲೀಸರಿಗೂ ಕರೆ ಮಾಡಲು ಯಶಸ್ವಿಯಾಗಿದ್ದಾಳೆ. ಈ ಎಲ್ಲಾ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇದನ್ನು ಪೊಲೀಸರು ಹಂಚಿಕೊಂಡು ಸಂಕಷ್ಟದ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಹೇಳಿದ್ದಾರೆ.