ತಾಯಿಗೆ ಗಾಬರಿಪಡಿಸಲು ಮಕ್ಕಳು ಮಾಡಿರುವ ತಮಾಷೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಭೂತಚೇಷ್ಠೆಯ ವಿಡಿಯೋ ಇದಾಗಿದೆ.
ಮಹಿಳೆಯೊಬ್ಬಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾಳೆ. ಆಗ ಆಟಿಕೆಯ ಒಂದು ಬಾತುಕೋಳಿ ನಡೆದಾಡುತ್ತಾ ಬರುತ್ತದೆ. ಇದನ್ನು ಕಂಡ ಮಹಿಳೆ ಗಾಬರಿಯಿಂದ ತಾನು ನೋಡುತ್ತಿರುವುದು ಕನಸೋ ನನಸೋ ತಿಳಿಯದೇ ಕನ್ನಡಕ ತೆಗೆಯುತ್ತಾಳೆ. ಆಗ ಬಾತುಕೋಳಿ ಅಲ್ಲಿಯೇ ನಿಂತುಕೊಳ್ಳುತ್ತದೆ.
ಅದು ನಡೆದಾಡುತ್ತಿರುವುದು ತನ್ನ ಭ್ರಮೆ ಇರಬೇಕು ಎಂದುಕೊಂಡ ಮಹಿಳೆ ಮತ್ತೊಮ್ಮೆ ಕನ್ನಡಕ ಹಾಕಿಕೊಳ್ಳುತ್ತಾಳೆ. ಬಾತುಕೋಳಿ ಮತ್ತಷ್ಟು ಮುಂದೆ ಚಲಿಸುತ್ತದೆ. ಮಹಿಳೆಗೆ ಗಾಬರಿಯಾಗಿ ಮತ್ತೊಮ್ಮೆ ಚಸ್ಮಾ ತೆಗೆದಾಗ ಬಾತುಕೋಳಿ ಅಲ್ಲಿಯೇ ನಿಂತಿರುತ್ತದೆ.
ಅರೆಕ್ಷಣ ಮಹಿಳೆಗೆ ಕಸಿವಿಸಿಯಾಗಿ ಮತ್ತೆ ಚಸ್ಮಾ ಹಾಕಿಕೊಳ್ಳುತ್ತಾಳೆ. ಕೂಡಲೇ ಬಾತುಕೋಳಿ ಒಂದೇ ಸಮನೆ ಜೋರಾಗಿ ಚಲಿಸಿ ಮಹಿಳೆಯತ್ತ ಹೋದಾಗ, ಆಕೆ ಭಯದಿಂದ ಸೋಫಾದಿಂದ ಬೀಳುತ್ತಾಳೆ.
ಇದನ್ನು ನೋಡಿದರೆ ನಕ್ಕು ನಗಿಸುತ್ತದೆ. ಆದರೆ ಇದೇ ವೇಳೆ ಹೃದಯದ ಸಮಸ್ಯೆ ಇದ್ದವರಿಗೆ ಹೀಗೆ ಮಾಡಲು ಹೋಗಬೇಡಿ, ಭಯದಿಂದ ಹಾರ್ಟ್ ಎಟ್ಯಾಕ್ ಆಗಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಇದಾಗಲೇ 13 ಮಿಲಿಯನ್ಗೂ ಅಧಿಕ ವ್ಯೂಸ್ ಕಂಡಿದೆ.