
ಅಧಿಕಾರಿಗಳಿಂದ ತಪ್ಪಿಸಿಕೊಂಡು ಅಕ್ರಮವಾಗಿ ಸರಕುಗಳನ್ನು ಸಾಗಿಸಲು ಕಳ್ಳಸಾಗಾಣಿಕೆದಾರರು ಕೈಗೊಂಡ ವಿಶಿಷ್ಟ ಮಾರ್ಗಗಳನ್ನು ವಿವರಿಸುವ ಸುದ್ದಿಗಳು ಇದಾಗಲೇ ಸಾಕಷ್ಟು ವೈರಲ್ ಆಗಿವೆ. ಅಂಥದ್ದರಲ್ಲಿ ಒಂದು ಸುದ್ದಿ ಇದೀಗ ಭಾರಿ ಸುದ್ದಿಯಾಗುತ್ತಿದೆ.
ಚೀನಾದಲ್ಲಿ ಮಹಿಳೆಯೊಬ್ಬಳು ಕಂಪ್ಯೂಟರ್ ಚಿಪ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಕಳ್ಳಸಾಗಣೆ ಮಾಡಲು ತಾನು ಗರ್ಭವತಿಯಂತೆ ನಟಿಸಿದ್ದಾಳೆ. ಹೊಟ್ಟೆಯೊಳಗೆ ಗರ್ಭವತಿಯ ಹಾಗೆ ಬಿಂಬಿಸುವ ಚೀಲವಿಟ್ಟುಕೊಂಡು ಅದರ ಒಳಗೆ ಕಂಪ್ಯೂಟರ್ ಚಿಪ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಇಟ್ಟುಕೊಂಡಿದ್ದಾಳೆ.
ಆದರೂ ಈಕೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮಕಾವ್‌ನಿಂದ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ನವೆಂಬರ್ 25 ರಂದು ಝುಹೈನಲ್ಲಿ ನಿಲ್ಲಿಸಲಾಯಿತು ಮತ್ತು ಆಕೆಯ ಬಳಿ ಒಟ್ಟು 202 ಪ್ರೊಸೆಸರ್‌ಗಳು ಮತ್ತು ಒಂಬತ್ತು ಸ್ಮಾರ್ಟ್‌ಫೋನ್‌ಗಳು ಪತ್ತೆಯಾಗಿವೆ.
ಅಧಿಕಾರಿಯೊಬ್ಬರು ಮಹಿಳೆಯನ್ನು ಪ್ರಶ್ನಿಸಿದಾಗ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಾಳೆ. ತಮಗೆ ಮೂರು ತಿಂಗಳು ಎಂದು ಹೇಳಿದ್ದಳು. ಆದರೆ ಆಕೆಯ ಹೊಟ್ಟೆ ನೋಡಿ ಅಧಿಕಾರಿಗಳಿಗೆ ಅನುಮಾನ ಬಂದು ತಪಾಸಣೆ ಮಾಡಿದಾಗ ಸಿಕ್ಕಿಬಿದ್ದಿದ್ದಾಳೆ.
https://twitter.com/hkepcmedia/status/1598587132192653312?ref_src=twsrc%5Etfw%7Ctwcamp%5Etweetembed%7Ctwterm%5E1598587132192653312%7Ctwgr%5Eb573ecdd8721b9d40e0ceab8aedb35d60df56619%7Ctwcon%5Es1_&ref_url=https%3A%2F%2Fwww.news18.com%2Fbuzz%2Fwoman-fakes-pregnancy-to-smuggle-semiconductors-in-china-arrested-at-zhuhai-6578575.html