alex Certify ಸಾಲ ತೀರಿಸಲು ತಾನು ಅನುಸರಿಸಿದ ಮಾರ್ಗವನ್ನು ವಿವರಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ತೀರಿಸಲು ತಾನು ಅನುಸರಿಸಿದ ಮಾರ್ಗವನ್ನು ವಿವರಿಸಿದ ಮಹಿಳೆ

ಮೈ ತುಂಬಾ ಸಾಲ ಮಾಡಿದ್ದರೆ, ಆ ಸಾಲಗಳನ್ನು ತೀರಿಸುವುದು ಹೇಗಪ್ಪಾ ಅಂತಾ ಬಹುತೇಕ ಮಂದಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಆದರೆ, ಮಹಿಳೆಯೊಬ್ಬಳು ಕೇವಲ ಎರಡು ವರ್ಷಗಳಲ್ಲಿ ತನ್ನ £ 4,000 (ರೂ.4 ಲಕ್ಷ) ಸಾಲವನ್ನು ತೆರವುಗೊಳಿಸಿದ ಬಗೆ ಹೇಗೆ ಎಂಬುದಾಗಿ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ.

ದೇವಾಂಶಾ ಅವರು ತಮ್ಮ ಸಂಬಳವನ್ನು ಐದು ಭಾಗಗಳಾಗಿ ಹೇಗೆ ವಿಭಜಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಆಕೆ ತನ್ನ ಗಳಿಕೆಯ ಶೇ.60 ರಷ್ಟನ್ನು ಅಗತ್ಯ ಜೀವನ ವೆಚ್ಚಗಳಿಗೆ, ಶೇ.10ರಷ್ಟು ತನ್ನ ಸಾಲಗಳನ್ನು ಪಾವತಿಸಲು, ಶೇ.10 ಹೂಡಿಕೆ ಮತ್ತು ಆಸ್ತಿ ನಿರ್ಮಾಣಕ್ಕಾಗಿ, 10 ಪ್ರತಿಶತ ಮೋಜಿಗಾಗಿ ಮತ್ತು ಉಳಿದ ಶೇ.10ರಷ್ಟು ಹಣವನ್ನು ತುರ್ತು ನಿಧಿಗಾಗಿ ಇರಿಸುತ್ತಾಳೆ.

ನಿಮ್ಮ ಅಗತ್ಯ ವೆಚ್ಚಗಳು ನಿಮ್ಮ ಸಂಬಳದ ಶೇಕಡಾ 60ಕ್ಕಿಂತ ಹೆಚ್ಚು ಅಥವಾ ಕಡಿಮೆಯಿದ್ದರೆ ಏನು ಮಾಡಬೇಕೆಂದು ಬಳಕೆದಾರರು ಕೇಳಿದಾಗ, ನೀವು ರೂಮ್‌ಮೇಟ್ ಅನ್ನು ಪಡೆಯುವುದು ಅಥವಾ ನಿಮ್ಮ ಅಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು ಎಂದು ದೇವಾಂಶ ವಿವರಿಸಿದ್ದಾರೆ. ಖರ್ಚು ಅಗತ್ಯವಿದ್ದರೆ, ಶೇಕಡಾವಾರುಗಳನ್ನು ಬದಲಾಯಿಸಬಹುದು ಅಥವಾ ಹೂಡಿಕೆ ಮಾಡಬಹುದು ಮತ್ತು ಮೋಜಿನ ಹಣವನ್ನು ಸಂಪೂರ್ಣವಾಗಿ ಕಡಿತಗೊಳಿಸಬಹುದು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...