ಸಂಗೀತವು ಗಡಿಗಳನ್ನು ಮೀರಿದೆ ಮತ್ತು ಎಲ್ಲಾ ದೇಶಿಯರನ್ನೂ ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಂತೂ ಆನ್‌ಲೈನ್‌ನಲ್ಲಿ ಸಂಗೀತ, ನೃತ್ಯಗಳದ್ದೇ ಭರಾಟೆ. ಅವುಗಳಲ್ಲಿ ಕೆಲವೊಂದು ಮಾತ್ರ ಹೇಗೋ ವೈರಲ್ ಆಗಿ ಬಿಡುತ್ತವೆ.
ಅಂಥದ್ದೇ ಒಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ನೇಪಾಳದ ಯುವತಿಯೊಬ್ಬರು ಸಿಂಬಾ ಅವರ ಆಂಖ್ ಮಾರೆ ಹಾಡಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದ್ದು, ನೆಟ್ಟಿಗರ ಮನಸೂರೆಗೊಂಡಿದೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಟಿಕ್‌ಟಾಕ್ ನೇಪಾಳಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.
ನೇಪಾಳದ ಅಂಗಡಿಯೊಂದರ ಹೊರಗೆ ಯುವತಿಯೊಬ್ಬರು ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಇವರು ಉತ್ಸಾಹದಿಂದ ಆಕರ್ಷಕ ಹಾಡಿಗೆ ನೃತ್ಯ ಮಾಡುತ್ತಿದ್ದರೆ, ಈ ನೃತ್ಯಕ್ಕೆ ಇನ್ನೊಬ್ಬಾಕೆ ಬಂದು ಸೇರಿಕೊಂಡಿದ್ದು, ಇವರ ನೃತ್ಯ ನೆಟ್ಟಿಗರನ್ನೂ ಕುಣಿಯುವಂತೆ ಮಾಡುತ್ತಿದೆ.