ವಿದ್ಯೆ ಕಲಿಯಲು ವಯಸ್ಸಿನ ಹಂಗಿಲ್ಲ. ಯಾವ ವಯಸ್ಸಲ್ಲಿ ಬೇಕಾದ್ರೂ ಶಿಕ್ಷಣ ಪಡೆಯಬಹುದು. ಅದಕ್ಕೆ ತಾಜಾ ಉದಾಹರಣೆಯೆಂಬಂತೆ ಕೆನಡಾದ ಶ್ರೀಮತಿ ವರತಾ ಷಣ್ಮುಗನಾಥನ್ ಅವರು ತಮ್ಮ 87 ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಆಶ್ಚರ್ಯವಾದರೂ ಇದು ನಿಜ.
ಇದು ವರತಾ ಷಣ್ಮುಗನಾಥನ್ ಅವರ ಎರಡನೇ ಸ್ನಾತಕೋತ್ತರ ಪದವಿ. ಲಂಡನ್ ವಿಶ್ವವಿದ್ಯಾನಿಲಯದಿಂದ 50 ರ ದಶಕದ ಮಧ್ಯಭಾಗದಲ್ಲಿ ಅವರು ತಮ್ಮ ಮೊದಲ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.
87 ನೇ ವಯಸ್ಸಲ್ಲಿ ಇಂತಹ ಸಾಧನೆ ಮಾಡಿರೋ ವರತಾ ಅವರನ್ನು ಒಂಟಾರಿಯೊ ಶಾಸಕಾಂಗದಲ್ಲಿ ಪ್ರಾಂತೀಯ ಸಂಸತ್ತಿನ ಸದಸ್ಯರು ಇತ್ತೀಚೆಗೆ ಗೌರವಿಸಿದರು. ಒಂಟಾರಿಯೊ ಶಾಸಕಾಂಗದಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ಈಗ ವೈರಲ್ ಆಗುತ್ತಿದೆ. ಇದನ್ನು ವಿಜಯ್ ತನಿಗಸಲಂ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಇನ್‌ಸ್ಟಾ ಬಯೋ ಪ್ರಕಾರ ವಿಜಯ್ ತನಿಗಲಸಂ ಅವರು ಸ್ಕಾರ್ಬರೋ-ರೂಜ್ ಪಾರ್ಕ್‌ನ ಪ್ರಾಂತೀಯ ಸಂಸತ್ತಿನ (MPP) ಸದಸ್ಯರಾಗಿದ್ದಾರೆ.