ತನ್ನ ಬಾಯ್‌ಫ್ರೆಂಡ್ ಜೊತೆಗೆ ನಡೆದ ವಾದ-ವಿವಾದವನ್ನು ಮರೆಯಲು ಯುವತಿಯೊಬ್ಬರು ’ಅಮ್ನೇಷಿಯಾ ನೀರನ್ನು’ ಆನ್ಲೈನ್‌ನಲ್ಲಿ ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ.
ಪ್ರಿಯಕರನೊಂದಿಗೆ ಆದ ಜಗಳದ ಕಹಿಯನ್ನು ಮರೆಯಬಹುದೆಂದು ಆಕೆಯನ್ನು ನಂಬಿಸಿದ್ದ ವಂಚಕನೊಬ್ಬನ ಮಾತುಗಳನ್ನು ನಂಬಿಕೊಂಡ ಈ ಯುವತಿಯಿಂದ 6,500 ಯುವಾನ್‌ಗಳನ್ನು (74,000 ರೂಪಾಯಿಗಳು), ಆನ್ಲೈನ್ ಮೂಲಕ ಕಳುಹಿಸಲು ಅಡಚಣೆಗಳಿರುವ ಕಾರಣ, ಮೊದಲು ಠೇವಣಿ ಮಾಡಲು ಕೇಳಿದ್ದಾನೆ.
ನದಿಯಲ್ಲಿ ಪತ್ತೆಯಾದ ಹೆಣ್ಣು ಕಂದಮ್ಮನ ಸಂಪೂರ್ಣ ಜವಾಬ್ದಾರಿ ಹೊತ್ತ ಯುಪಿ ಸರ್ಕಾರ
ಆತನ ಮಾತುಗಳನ್ನು ನಂಬಿದ ಕಿಯಾನ್ ಹೆಸರಿನ ಈಕೆ, ಆತನಿಗೆ ದುಡ್ಡು ಕೊಟ್ಟದ್ದಲ್ಲದೇ ಆತನೊಂದಿಗೆ ಚಾಟ್ ಹಿಸ್ಟರಿಯನ್ನೂ ಡಿಲೀಟ್ ಮಾಡಿದ್ದಾರೆ. ದುಡ್ಡು ಕೊಟ್ಟ ಕೂಡಲೇ ಆಕೆಯ ಫೋನ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾನೆ ವಂಚಕ.
ʼಕೊರೊನಾʼ ಕಾಲದಲ್ಲಿ ಮಾಡಿ ಕುಡಿಯಿರಿ ಶುಂಠಿ ಟೀ….!
ತನಗೆ ವಂಚನೆಯಾಗಿದೆ ಎಂದು ಅರಿತ ಕಿಯಾನ್ ಪೊಲೀಸರಿಗೆ ದೂರು ಕೊಟ್ಟಿದ್ದು, “ಎಲ್ಲೂ ಸಹ ’ಅಮ್ನೇಶಿಯಾ ನೀರು’ ಎಂಬುದಿಲ್ಲ” ಎಂದು ಇದಾದ ಬಳಿಕ ಆಕೆಯ ಅರಿವಿಗೆ ಬಂದಿದೆ.