ಕರುಣೆ ಎನ್ನುವುದು ಬಹಳ ಶ್ರೇಷ್ಠವಾದ ಗುಣ. ಆದರೆ ಕರುಣೆ ತೋರಲು ಯೋಗ್ಯರನ್ನು ಆಯ್ದುಕೊಳ್ಳುವುದು ಅಷ್ಟೇ ದೊಡ್ಡ ತಲೆನೋವಿನ ಕೆಲಸ. ತಪ್ಪಾದ ವ್ಯಕ್ತಿಗಳ ಮೇಲೆ ಹೀಗೆ ಕರುಣೆ ತೋರಿದರೆ ನಮಗೇ ಭಾರೀ ನಷ್ಟವಾಗುವ ಅನೇಕ ನಿದರ್ಶನಗಳನ್ನು ಕಂಡಿದ್ದೇವೆ.
ಹರಿಯಾಣಾದ ಅಂಬಾಲಾ ನಿವಾಸಿ ಮಂದೀಪ್ ಸಿಂಗ್ ಹೆಸರಿನ ಈ ವ್ಯಕ್ತಿಗೂ ಇಂಥ ಅನುಭವವಾಗಿದೆ. ಅಕ್ಟೋಬರ್ 24ರಂದು ತಮ್ಮ ಬಳಿ ಬಂದ ಮಹಿಳೆಯೊಬ್ಬಳು, ತನ್ನ ತಾಯಿಗೆ ವಯಸ್ಸಾಗಿದ್ದು, ಆರೋಗ್ಯ ಸರಿಯಿಲ್ಲದಿರುವ ಕಾರಣ ಆಕೆಯನ್ನು ತುರ್ತಾಗಿ ಆಕೆಯನ್ನು ಕಾಣಬೇಕೆಂದು ಮರುಕ ಹುಟ್ಟುವಂತೆ ಮಾತನಾಡಿದ ಆಕೆಯನ್ನು ನಂಬಿದ ಮಂದೀಪ್ ಸಿಂಗ್ ತಮ್ಮ ಕಾರನ್ನು ಕೊಟ್ಟು ಕಳುಹಿಸಿದ್ದಾರೆ.
ಆದರೆ ಹೀಗೆ ಕಾರು ತೆಗೆದುಕೊಂಡು ಹೋದ ಆಕೆ ಮರಳಿ ಬರಲೇ ಇಲ್ಲವಾದ ಕಾರಣ ಮಂದೀಪ್ ಸಿಂಗ್ ಇಲ್ಲಿನ ಬಲೋಂಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
BREAKING: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ
ದೂರಿನ ಪ್ರಕಾರ: ಮಂದೀಪ್ ಸಿಂಗ್ ತನ್ನ ಸ್ನೇಹಿತ ರಾಮ್ ಕಲನ್‌ಗೆ 7,000 ರೂ.ಗಳನ್ನು ನೀಡಬೇಕಿತ್ತು. ಆದರೆ ಆತನ ಸ್ನೇಹಿತ ಕೊಟ್ಟ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಮಹಿಳೆಯೊಬ್ಬಳು ಮಂದೀಪ್‌ನನ್ನು ಬಲೋಂಗಿಯ ಹೊಟೇಲ್ ಒಂದಕ್ಕೆ ಬರಲು ತಿಳಿಸಿದ್ದಾರೆ. ಮಂದೀಪ್ ಅಲ್ಲಿಗೆ ಬರುತ್ತಲೇ ಆತನಿಂದ ದುಡ್ಡು ಪಡೆದುಕೊಂಡ ಮಹಿಳೆ, ಮಂದೀಪ್‌ನ ಸ್ವಿಫ್ಟ್ ಕಾರನ್ನೂ ಕೊಂಡೊಯ್ದಿದ್ದಾಳೆ. ತನ್ನ ತಾಯಿಗೆ ಅನಾರೋಗ್ಯದ ಕಾರಣ ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಆಕೆಯನ್ನು ಕಾಣಲು ಕಾರು ತೆಗೆದುಕೊಂಡು ಹೋಗುವುದಾಗಿ ಈ ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಯನ್ನು ಸಂಪರ್ಕಕ್ಕೆ ಪಡೆಯಲು ಮಾಡಿದ ಯತ್ನಗಳೆಲ್ಲಾ ವಿಫಲಗೊಂಡಿವೆ ಎಂದು ತಿಳಿಸಿದ ಮಂದೀಪ್, ಆಕೆ ಮರಳಿ ಬರಲೇ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.