ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಪುರುಷನಂತೆ ವೇಷ ಧರಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆರಂಭದಲ್ಲಿ ಮಹಿಳೆಯನ್ನು ಪುರುಷ ಎಂದು ತಪ್ಪಾಗಿ ಗುರುತಿಸಿದ್ದರು. ಅತ್ಯಾಚಾರದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ್ದರು. ನಂತರ ಆರೋಪಗಳನ್ನು ಕೈಬಿಟ್ಟು ಆಕೆಯ ವಿರುದ್ಧ ಅಪಹರಣ ಪ್ರಕರಣದಡಿ ಕೇಸ್ ದಾಖಲಿಸಲಾಯಿತು.
ಆರೋಪಿಗಳು ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತ ಬಾಲಕಿಯ ದೂರಿನ ಮೇರೆಗೆ ಶಂಕರ್ ಎಂಬುವನ ವಿರುದ್ಧ ನವೆಂಬರ್ 28 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಮಹಿಳಾ ಠಾಣೆಯ ಎಸ್‌ಹೆಚ್‌ಒ ಮಾಯಾ ಪಂಡಿತ್ ತಿಳಿಸಿದ್ದಾರೆ.
ಅಪ್ರಾಪ್ತರ ಪ್ರಕಾರ ಆರೋಪಿ ಆಕೆಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ್ದ. ಡಿಸೆಂಬರ್ 5 ರಂದು, ಹುಡುಗಿ ರಚಿಸಿದ ಚಿತ್ರದ ಸಹಾಯದಿಂದ ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ತಾನು ಪುರುಷನಲ್ಲ, ಪುರುಷನ ವೇಷದಲ್ಲಿ ಬದುಕುತ್ತಿರುವ ಮಹಿಳೆ ಎಂದು ಹೇಳಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿ ಮಹಿಳೆ ಎಂಬುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಅತ್ಯಾಚಾರದ ಆರೋಪ ಸುಳ್ಳು ಎಂದು ಕಂಡುಬಂದರೂ, ಮಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಆಕೆಯನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಎಸ್‌ಹೆಚ್‌ಒ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ. ಪೊಲೀಸರ ಪ್ರಕಾರ, ಪತಿ ತೊರೆದ ನಂತರ ಜೀವನೋಪಾಯಕ್ಕಾಗಿ ಮಹಿಳೆ ಪುರುಷನಂತೆ ವೇಷ ಧರಿಸಿದ್ದಳು. ಅವಳು ಮದುವೆಗಳಲ್ಲಿ ಮೇಜುಗಳನ್ನು ಹಾಕುವುದು, ಅಡುಗೆ ಮಾಡುವುದು ಅಥವಾ ದೀಪಗಳನ್ನು ಹಿಡಿಯುವುದು ಮುಂತಾದ ಸಣ್ಣ ಕೆಲಸಗಳನ್ನು ಮಾಡುತ್ತಿದ್ದಳು ಎನ್ನಲಾಗಿದೆ.