ತಪ್ಪಾದ ಗುಂಪಿನ ರಕ್ತವನ್ನು ನೀಡಿದ ಕಾರಣಕ್ಕೆ ಇಪ್ಪತ್ತೈದು ವರ್ಷದ ಮಹಿಳೆ ಮೃತಪಟ್ಟ ಘಟನೆ ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ಕುಟ್ರಾ ಬ್ಲಾಕ್‌ನ ಬುಡಕಟಾ ಗ್ರಾಮದ ನಿವಾಸಿ ಸರೋಜಿನಿ ಕಾಕು ಅವರನ್ನು ಗುರುವಾರ ಮಧ್ಯಾಹ್ನ ರೂರ್‌ಕೆಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತಹೀನತೆಯಿಂದ ಬಳಲುತ್ತಿದ್ದು, ಆಕೆಗೆ ರಕ್ತ ನೀಡಲಾಗಿತ್ತು. ಬಳಿಕ ಆಕೆ ನಿಧನಳಾದಳು.
ತಾನು ಅಳುವಾಗ ಮೇಕಪ್ ಹಾಳಾಗುವುದಿಲ್ಲ ತಾನೇ ಎಂದು ಪ್ರಶ್ನಿಸಿದ ವಧು….!
ಆಕೆಗೆ ತಪ್ಪು ರಕ್ತ ನೀಡಲಾಗಿದ್ದು, ಇದರಿಂದ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅವಳ ರಕ್ತದ ಗುಂಪು ಒ ಪಾಸಿಟಿವ್, ಆದರೆ ಬಿ ಪಾಸಿಟಿವ್ ರಕ್ತ ನೀಡಲಾಗಿದೆ ಎಂದು ಸಂಬಂಧಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸಂರಕ್ಷಿಸಲಾಗಿದೆ ಎಂದು ಕುತ್ರಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿಕೆ ಬಿಹಾರಿ ತಿಳಿಸಿದ್ದಾರೆ. ಹಾಗೆಯೇ ಸಮಸ್ಯೆ ಪರಿಶೀಲಿಸಲು ಆಸ್ಪತ್ರೆಯು ತನಿಖಾ ಸಮಿತಿಯನ್ನು ರಚಿಸಿದೆ ಮತ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.