ನವದೆಹಲಿ: 35 ವರ್ಷದ ಮಹಿಳೆಯೊಬ್ಬರು ಭಾನುವಾರ ಮೆಟ್ರೋ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದರ್ಲೋಕ್ ನಿಲ್ದಾಣದಲ್ಲಿ ನಡದಿದೆ.
ಗುರುವಾರ ಈ ಅಪಘಾತ ಸಂಭವಿಸಿದ್ದರೆ, ರೀನಾ ಎಂದು ಗುರುತಿಸಲ್ಪಟ್ಟ ಮಹಿಳೆ ಶನಿವಾರ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ದೆಹಲಿ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಟ್ರೋ ಬಾಗಿಲುಗಳನ್ನು ಮುಚ್ಚುವಾಗ ಸೀರೆಯ ಒಂದು ಭಾಗವು ಮೆಟ್ರೋ ಬಾಗಿಲುಗಳ ನಡುವೆ ಸಿಲುಕಿಕೊಂಡ ನಂತರ ಮಹಿಳೆ ಕೆಳಗೆ ಬಿದ್ದು ಮೆಟ್ರೋ ರೈಲಿನ ಕೆಳಗೆ ಬಿದ್ದಳು. ಆಕೆಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಹಿಳೆ ಮೆಟ್ರೋ ರೈಲಿನಿಂದ ಇಳಿಯುತ್ತಿದ್ದಳೋ ಅಥವಾ ಹತ್ತುತ್ತಿದ್ದಳೋ ಎಂಬುದು ಇನ್ನೂ ತಿಳಿದುಬಂದಿಲ್ಲ.