ಲಂಡನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶಾರೀರಿಕ ಸಂಬಂಧ ನಡೆಸುತ್ತಿದ್ದ ಪತಿ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಪತ್ನಿ ಸಾವನ್ನಪ್ಪಿದ್ದಾಳೆ. ಪತ್ನಿ ಕೈ-ಕಾಲು ಕಟ್ಟಿದ್ದ ಪತಿ, ಆಕೆ ಬಾಯಿಗೆ ಬಟ್ಟೆ ಹಾಕಿದ್ದ ಎನ್ನಲಾಗಿದೆ. ನಶೆಯಲ್ಲಿದ್ದ ಪತಿ ಅಲ್ಲಿಯೇ ಮಲಗಿದ್ದನಂತೆ.
ನಾರ್ತ್ ವೆಸ್ಟ್ ಲೈವ್ನ ಸುದ್ದಿ ಪ್ರಕಾರ, ವಾರೆನ್ ಮಾರ್ಟಿನ್ ಕೌಲ್ಟರ್ಗೆ ನ್ಯಾಯಾಲಯ 6 ವರ್ಷಗಳ ಶಿಕ್ಷೆ ವಿಧಿಸಿದೆ. ವಾರೆನ್ ನಿರ್ಲಕ್ಷ್ಯದಿಂದ ಪತ್ನಿ ಸಾವನ್ನಪ್ಪಿದ್ದಾಳೆಂದು ಕೋರ್ಟ್ ತೀರ್ಪು ನೀಡಿದೆ. ವಾರೆನ್ ಮಾರ್ಟಿನ್ ಕೌಲ್ಟನ್ ತನ್ನ 38 ವರ್ಷದ ಪತ್ನಿ ಕ್ಲೇರ್ ವೈಟ್ ಜೊತೆ ಐಷಾರಾಮಿ ವಸತಿಗೃಹಕ್ಕೆ ಹೋಗಿದ್ದ. ವಾರೆನ್ ಮತ್ತು ಕ್ಲೇರ್ ಈ ಪ್ರವಾಸದಲ್ಲಿ ಸಾಕಷ್ಟು ಸಾಹಸಗಳನ್ನು ಮಾಡುವ ಪ್ಲಾನ್ ನಲ್ಲಿದ್ದರು.
ಇದೇ ಸಾಹಸದಡಿ ಪತ್ನಿ ಬಾಯಿಗೆ ಬಟ್ಟೆ ಹಾಕಿದ್ದ ಎನ್ನಲಾಗಿದೆ. ನಶೆಯಲ್ಲಿದ್ದ ವಾರೆನ್ ನಿದ್ರೆಗೆ ಜಾರಿದ್ದಾನೆ. ಪತ್ನಿ ಸ್ಥಿತಿ ಬಿಗಡಾಯಿಸಿದ್ದು, ಆಕೆ ಸಾವನ್ನಪ್ಪಿದ್ದಾಳೆ. ಬೆಳಿಗ್ಗೆ ಎಚ್ಚರವಾಗ್ತಿದ್ದಂತೆ ಪತ್ನಿ ಸಾವನ್ನಪ್ಪಿರುವುದನ್ನು ತಿಳಿದ ವಾರೆನ್ ಅಲ್ಲಿಂದ ಓಡಿ ಹೋಗಿದ್ದ. ರೆಸಾರ್ಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರೂಮಿನಲ್ಲಿ ಆಲ್ಕೋಹಾಲ್, ಡ್ರಗ್ಸ್ ಸಿಕ್ಕಿತ್ತು.