
ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ-ವಿಚಿತ್ರ ಸುದ್ದಿಗಳು ಹೊರ ಬರ್ತಿರುತ್ತವೆ. ಈಗ ಬ್ರಿಟನ್ ಮಹಿಳೆಯೊಬ್ಬಳು ಟಿಕ್ ಟಾಕ್ ನಲ್ಲಿ ಆಶ್ಚರ್ಯಕರ ಸುದ್ದಿಯನ್ನು ಹಂಚಿಕೊಂಡಿದ್ದಾಳೆ. ಕಳೆದು ಒಂದು ವರ್ಷದಿಂದ ಆಕೆ ಶಾರೀರಿಕ ಸಂಬಂಧ ಬೆಳೆಸಿಲ್ಲವಂತೆ. ಆದ್ರೆ ವೈದ್ಯರು ಆಕೆ ಗರ್ಭಿಣಿ ಎಂಬ ವರದಿ ನೀಡಿದ್ದಾರಂತೆ.
ಸಮಂತಾ ಗಿಬ್ಸನ್ ಹೆಸರಿನ ಮಹಿಳೆ, ಹೊಟ್ಟೆ ನೋವು ಹಾಗೂ ತಲೆ ಸುತ್ತಿನಿಂದ ಬಳಲುತ್ತಿದ್ದಳಂತೆ. ಹಾಗಾಗಿ ಆಕೆ ವೈದ್ಯರ ಬಳಿ ಹೋಗಿದ್ದಾಳೆ. ವೈದ್ಯರು ರಕ್ತ ಪರೀಕ್ಷೆ ಮಾಡಿಸಿದ್ದಾರೆ. ನಂತ್ರ, ಸಮಂತಾ ಗಿಬ್ಸನ್ ಗರ್ಭಿಣಿ ಎಂಬ ವರದಿ ನೀಡಿದ್ದಾರೆ. ಇದನ್ನು ನೋಡಿದ ಸಮಂತಾ ಗಿಬ್ಸನ್ ಕಂಗಾಲಾಗಿದ್ದಾಳೆ. ಕಳೆದ ಒಂದು ವರ್ಷದಿಂದ ಶಾರೀರಿಕ ಸಂಬಂಧ ಬೆಳೆಸಿಲ್ಲ. ನಾನು ಗರ್ಭಿಣಿಯಾಗಲು ಸಾಧ್ಯವಿಲ್ಲವೆಂದು ಆಕೆ ಹೇಳಿದ್ದಾಳೆ.
ವೈದ್ಯರು ಇನ್ನೊಮ್ಮೆ ಪರೀಕ್ಷೆ ಮಾಡಿದ್ದಾರಂತೆ. ಆದ್ರೆ ಅದ್ರ ವರದಿಯನ್ನು ಇನ್ನೂ ನೀಡಿಲ್ಲವಂತೆ. ವರದಿ ಅದಲು-ಬದಲಾಗಿರಬಹುದೆಂದು ಸಮಂತಾ ಗಿಬ್ಸನ್ ಹೇಳಿದ್ದಾಳೆ. ಆಕೆ ಈ ವಿಡಿಯೋವನ್ನು ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.