ಸಾಮಾನ್ಯವಾಗಿ ಕಚೇರಿಗೆ ಹೋಗಲು ಇಷ್ಟವಿಲ್ಲದಿದ್ದಾಗ ಅಥವಾ ಹೊರಗಡೆ ಹೋಗಲು ಬಯಸಿದಾಗ ಬಹುತೇಕರು ಬೇರೆ ಬೇರೆ ಕಾರಣ ನೀಡಿ ರಜೆ ಪಡೆಯುತ್ತಾರೆ. ಇಂತಹ ವೇಳೆ ಎಲ್ಲರಿಗೂ ತುಂಬಾ ಸುಲಭವಾಗಿ ಸಿಗುವ ಉಪಾಯವೇ ಅನಾರೋಗ್ಯ ರಜೆ.
ಹುಷಾರಿಲ್ಲ ಎಂದು ಹೇಳಿ ರಜೆ ಕೇಳಲು ಮುಂದಾಗುತ್ತಾರೆ. ಇದೇ ರೀತಿ ಕೆನಡಾದ ಮಹಿಳೆಯೊಬ್ಬರು ಕಂಪನಿಗೆ ರಜೆ ಕೇಳಿದ್ದಾರೆ. ಆದರೆ ಆಕೆಗೆ ರಜೆ ನೀಡಲು ಕಂಪನಿ ನಿರಾಕರಿಸಿದೆ. ತನಗೆ ಅಗತ್ಯವಿರುವ ಕೆಲಸಕ್ಕೆ ರಜೆಯ ಮೇಲೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ತಿಳಿದ ಮಹಿಳೆ ಉಪಾಯವೊಂದನ್ನು ಮಾಡಿದರು.
ಆಕೆ ತನ್ನನ್ನೇ ಹೋಲುವ ತನ್ನ ಅವಳಿ ಸೋದರಿಯನ್ನು ಕೆಲಸಕ್ಕೆ ಕಳುಹಿಸಿದಳು. ಕೆನಡಾದ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾದ ಆರಿ ಮತ್ತು ನೋಯ್ ಚಾನ್ಸ್ ಅವರು ತಮ್ಮಲ್ಲಿ ಒಬ್ಬರು ಮತ್ತೊಬ್ಬರು ಕೆಲಸ ಮಾಡುವ ಸ್ಥಳಕ್ಕೆ ಹೋಗುವುದು ಉತ್ತಮ ಎಂದು ನಿರ್ಧರಿಸಿದರು. ಈ ರೀತಿ ಕೆಲಸ ಮಾಡಿದ ನಂತರ ಅವರು ಅದನ್ನು ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದರು.
ಅಲ್ಲೇ ಆಗಿದ್ದು ಎಡವಟ್ಟು. ಇದನ್ನು ವೀಕ್ಷಿಸಿದ ಕಂಪನಿಯ ಬಾಸ್, ಬಲವಾಗಿ ಎಚ್ಚರಿಕೆ ನೀಡಿದರು. “ನಾನು ಸ್ಪಷ್ಟವಾಗಿ ಹೇಳುತ್ತೇನೆ, ನಿಮ್ಮ ರಜೆಯ ವಿನಂತಿಯನ್ನು ನಿರಾಕರಿಸಿದ ನಂತರ ರಜೆಯ ಮೇಲೆ ನೀವು ಹೊರಗುಳಿದಾಗ ನಿಮ್ಮ ಅವಳಿ ಸಹೋದರಿಯನ್ನು ಬದಲಿಯಾಗಿ ಕಂಪನಿಗೆ ಕಳುಹಿಸಿರುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಿಯಮಗಳಿಗೆ ಬದ್ಧರಾಗಿರುವ ನಿಮ್ಮ ಸಹೋದ್ಯೋಗಿಗಳಿಗೆ ಮತ್ತು ನಿಮಗೆ ಜವಾಬ್ದಾರಿಗಳನ್ನು ವಹಿಸುವ ಕಂಪನಿಗೆ ಇದು ಕಪಾಳಮೋಕ್ಷವಾಗಿದೆ.
ಕೆಲಸದ ಸ್ಥಳದ ಒಳಗೆ ಮತ್ತು ಹೊರಗೆ ವೃತ್ತಿಪರ ನಡವಳಿಕೆಯ ಪ್ರಾಮುಖ್ಯತೆಯನ್ನು ನಾನು ನಿಮಗೆ ನೆನಪಿಸಬೇಕಾಗಿಲ್ಲ. ನಿಮ್ಮ ಕ್ರಿಯೆಗಳು ನಿಮ್ಮ ಮೇಲೆ ಕೆಟ್ಟದಾಗಿ ಪ್ರತಿಬಿಂಬಿಸುವುದಲ್ಲದೆ ನಮ್ಮ ಕಂಪನಿಯ ಖ್ಯಾತಿಯನ್ನು ಹಾಳುಮಾಡುತ್ತವೆ. ಈ ಮಟ್ಟದ ನಿರ್ಲಕ್ಷ್ಯವು ಸ್ಪಷ್ಟವಾಗಿ ಆಘಾತಕಾರಿಯಾಗಿದೆ ಮತ್ತು ಅದನ್ನು ಸಹಿಸಲಾಗುವುದಿಲ್ಲ, “ಯಾವುದೇ ದುಷ್ಕೃತ್ಯದ ನಿದರ್ಶನಗಳು ಸಂಭಾವ್ಯ ಶಿಸ್ತಿನ ಕ್ರಮ ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತವೆ.” ಎಂದು ಎಚ್ಚರಿಸಿದೆ.