ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಅಪರಿಚಿತರು ಪರಿಚಯ ಆಗುತ್ತಾರೆ. ಅದೇ ಪರಿಚಯ ಆ ನಂತರ ಸ್ನೇಹ, ಕೊನೆಗೆ ಪ್ರೇಮಕ್ಕೆ ತಿರುಗುತ್ತೆ. ಇಂತಹ ಪರಿಚಯಗಳು ಕೆಲವೊಮ್ಮೆ ದೊಡ್ಡ ದೊಡ್ಡ ಎಡವಟ್ಟಿಗೆ ಕಾರಣವಾಗಿರುತ್ತೆ. ಈಗ ಅಂತಹದ್ದೇ ಸುದ್ದಿಯೊಂದು ಇತ್ತಿಚೆಗೆ ವೈರಲ್ ಆಗಿದೆ.
ಕಳೆದ ಆರು ವರುಷಗಳಿಂದ ಡೇಟಿಂಗ್ ಮಾಡುತ್ತಿದ್ದ 30 ವರ್ಷದ ಮಹಿಳೆ ತನ್ನ ಹಾಗೂ ತನ್ನ ಪ್ರಿಯಕರನ ಡಿಎನ್ಎ ಟೆಸ್ಟ್ ಮಾಡಿಸಿದಾಾಗ ಬಂದ ರಿಸಲ್ಟ್ ನೋಡಿ ಎಂಥವರೂ ಕೂಡ ಶಾಕ್ ಆಗುವ ಹಾಗಿತ್ತು.
6 ವರ್ಷಗಳಿಂದ ಮಹಿಳೆಯೊರ್ವಳು ಡೇಟಿಂಗ್ ಮಾಡುತ್ತಿದ್ದರು. ಒಂದು ದಿನ ಸಹಜವಾಗಿ ಡಿಎನ್ಎ ಟೆಸ್ಟ್ ಮಾಡಿಸಿದಾಗ ಆಕೆ ಮತ್ತು ಆಕೆಯ ಗೆಳೆಯನ ಡಿಎನ್ಎ ಟೆಸ್ಟ್ ಮ್ಯಾಚ್ ಆಗಿದೆ. ಇಷ್ಟು ದಿನ ಗೆಳೆಯನಾಗಿದ್ದವನು ತನ್ನ ಜೈವಿಕ ಸಹೋದರ ಅನ್ನೋದು ಗೊತ್ತಾದ ಮೇಲೆ ಶಾಕ್ ಆಗಿದೆ. ಆ ಅನಾಮಧೇಯ ಮಹಿಳೆ ತಮಗಾದ ಅನುಭವನ್ನ ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ತನ್ನ ಹೆತ್ತವರು ತನ್ನನ್ನು ದತ್ತು ತೆಗೆದುಕೊಂಡಿದ್ದರು. ಆದ್ದರಿಂದ ನನಗೆ ನನ್ನ ಹೆತ್ತವರು ಯಾರು ಅಂತ ಗೊತ್ತಿರಲಿಲ್ಲ ಅಂತ ಬರೆದುಕೊಂಡಿದ್ದಾರೆ.
ನನಗೆ 30 ವರ್ಷ ನನ್ನ ಸಹೋದರನಿಗೆ 32 ವರ್ಷ ಇಷ್ಟು ದಿನ ಗೆಳೆಯ ಅಂತ ಅಂದುಕೊಂಡವನನ್ನ ಈಗ ಸಹೋದರ ಅಂತ ಹೇಳುವುದು ಕಷ್ಟ. ಇದು ನನಗೆ ವಿಚಿತ್ರ ಅಂತ ಅನಿಸುತ್ತೆ. ನಾನು ಪುಟ್ಟ ಮಗುವಾಗಿದ್ದಾಗ ನನ್ನನ್ನು ದತ್ತು ಪಡೆಯಲಾಗಿತ್ತು. ಇದು ನನಗೆ ಇಲ್ಲಿಯವರೆಗೂ ಗೊತ್ತೇ ಇರಲಿಲ್ಲ. ಈಗ ಗೊತ್ತಾಗಿದೆ. ನಾನು ದತ್ತು ಪಡೆದಿರುವ ವಿಷಯದಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಎಂದು ಸವಿಸ್ತಾರವಾಗಿ ಬರೆದಿದ್ದಾರೆ.
ನಾನು ನನ್ನ ಹೆತ್ತವರನ್ನು ಪ್ರೀತಿಸುತ್ತೇನೆ. ನನ್ನ ಪೋಷಕರು ನನ್ನನ್ನು ಪ್ರೀತಿಸುತ್ತಾರೆ. ಅವರು ನನ್ನನ್ನು ದತ್ತು ಪಡೆದುಕೊಂಡಿದ್ದರೂ ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ, ಕಾಳಜಿ ವಹಿಸುತ್ತಾರೆ. ನನ್ನ ಗೆಳೆಯನನ್ನು ಸಹ ದತ್ತು ತೆಗೆದುಕೊಳ್ಳಲಾಗಿದೆ. ನಾವು ಭೇಟಿಯಾದಾಗ ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಆತನಿಗೂ ನನ್ನಂತೆಯೇ ಒಳ್ಳೆಯ ಕುಟುಂಬ ಸಿಕ್ಕಿದೆ. ನಾವು ಅದೃಷ್ಟವಂತರು.
ನನ್ನ ಮತ್ತು ನನ್ನ ಗೆಳೆಯನ ರಿಲೆಶನ್ಶಿಪ್ ತುಂಬಾ ಚೆನ್ನಾಗಿದೆ. ತುಂಬಾ ಜನ ನಾವಿಬ್ಬರಲ್ಲಿ ತುಂಬಾ ಹೊಲಿಕೆ ಇದೆ ಅಂತ ಹೇಳಿದ್ದರು. ನಿಜ. ಆತ ನನ್ನ ಸಹೋದರ. ಮಲ ಸಹೋದರನಲ್ಲ. ಆರು ವರ್ಷದಿಂದ ಒಟ್ಟಿಗೆ ಇರುವ ನಾವು, ಕಷ್ಟ-ಸುಖ ಹಂಚಿಕೊಂಡಿದ್ದೇವೆ.
ನಮ್ಮ ಭಾವನೆಗಳನ್ನ ಹಂಚಿಕೊಂಡಿದ್ದೇವೆ. ಗಂಡ-ಹೆಂಡತಿ ಹೇಗ್ಹೇಗಿರಬೇಕೋ ನಾವು ಹಾಗೆ ಇದ್ದೇವೆ. ಇದು ನಮ್ಮ ಕುಟುಂಬದವರಿಗೂ ಗೊತ್ತು. ನಾವು ಮೊದಲೇ ನಮಗೆ ಮಕ್ಕಳು ಬೇಡ ಅಂತ ನಿರ್ಧರಿದ್ದೇವೆ ಆದ್ದರಿಂದ ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಉಂಟಾಗಲಾರದು. ಆರೋಗ್ಯದ ಅಪಾಯದ ಕಾರಣದಿಂದ ನಾನು ಮಕ್ಕಳ ಬಗ್ಗೆ ಯೋಚನೆ ಮಾಡುವುದಿಲ್ಲ. ನಾನು ಡಿಎನ್ಎ ಮ್ಯಾಚ್ ಆಗಿರುವ ವಿಷಯ ನನ್ನ ಪ್ರಿಯರಕನಿಗೆ ಇನ್ನೂ ಹೇಳಿಲ್ಲ. ಈಗ ನನಗೆ ಭಯವಾಗುತ್ತಿದೆ ಅನ್ನೋದನ್ನ ತಮ್ಮ ರೆಡ್ಡಿಟ್ ಸೋಶಿಯಲ್ ಮೀಡಿಯಾ ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.