ಈ ಜಗತ್ತಿನಲ್ಲಿ ದಿನವೂ ಹೊಸತಾದ, ಆಶ್ಚರ್ಯ ಮೂಡಿಸುವ ಘಟನೆಗಳು ಜರುಗುತ್ತಲೇ ಇರುತ್ತವೆ. ಅವುಗಳಲ್ಲಿ ಮುಖ್ಯವಾಗಿ ಡಾನ್ಸ್ ಜಗತ್ತಿನಲ್ಲಿ ಹೊಸ ಡಾನ್ಸರ್‌ಗಳು, ಹೊಸ ರೀತಿಯ ಡಾನ್ಸ್‌ಗಳ ಮೂಲಕ ಜನರ ಮನಗೆಲ್ಲುತ್ತಲೇ ಇರುತ್ತಾರೆ.
ರಾಜಸ್ಥಾನದ ಉದಯ್‌ಪುರದಲ್ಲಿ ಇತ್ತೀಚೆಗೆ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಜಾನಪದ ನೃತ್ಯಗಾರ್ತಿಯೊಬ್ಬರ ವಿಶಿಷ್ಟ ಶೈಲಿಯ ಡಾನ್ಸ್‌ವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಕೂಡ.
ಮೈತುಂಬ ಪಾರಂಪರಿಕ ಆಭರಣಗಳನ್ನು ಧರಿಸಿರುವ ನೃತ್ಯಗಾರ್ತಿ ’ಕೃಷ್ಣ ಕನ್ವರ್ ಗೆಹ್ಲೋಟ್’ ಅವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾನ್ಸ್ ವೇಳೆ ಕಾಲುಗಳಿಗೆ ‘ ಸ್ಕೇಟಿಂಗ್ ಚಕ್ರ ‘ ಗಳನ್ನು ಧರಿಸಿದ್ದಾರೆ.
ಸ್ಕೇಟಿಂಗ್ ಮಾಡುತ್ತಲೇ ಕೈಗಳನ್ನು ಮತ್ತು ಸೊಂಟವನ್ನು ಜಾನಪದ ಸಂಗೀತದ ಹಿನ್ನೆಲೆಯಲ್ಲಿ ಕುಣಿಸುತ್ತಾ ನೃತ್ಯ ಪ್ರದರ್ಶಿಸಿದ್ದಾರೆ. ಇಂಥ ಅದ್ಭುತ, ಅಚ್ಚರಿಯ ನೃತ್ಯವನ್ನು ಕಂಡ ಜನರು ಚಪ್ಪಾಳೆಯ ಸುರಿಮಳೆಗೈದಿದ್ದಾರೆ. ಕೃಷ್ಣ ಅವರು ಕೂಡ ಡಾನ್ಸ್‌ನ ಕೊನೆಯಲ್ಲಿ ಎರಡು ಕೈಗಳನ್ನು ಮುಗಿದು, ತಮ್ಮನ್ನು ಉತ್ತೇಜಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಚಿಕನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಕೋಳಿ ಮೊಟ್ಟೆ, ಮಾಂಸದಿಂದ ಪೌಷ್ಠಿಕಾಂಶ ಹೆಚ್ಚಳ
2021ನೇ ಸಾಲಿನ ಓಢನಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದಿರುವ ವಿಶೇಷ ನೃತ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಟ್ವಿಂಕಲ್ ಬೈಸಾ ಎನ್ನುವವರು ಹಂಚಿಕೊಂಡಿದ್ದಾರೆ. ಇಂಥ ವಿಶೇಷ ಶೈಲಿಯ ನೃತ್ಯವನ್ನು ನೇರವಾಗಿ ವೀಕ್ಷಿಸುವ ಆಸೆ ಹೆಚ್ಚುತ್ತಿದೆ. ಕೃಷ್ಣ ಅವರು ಇನ್ನೂ ಹೆಚ್ಚು ರಾಜ್ಯಗಳಲ್ಲಿ ಅವರ ವಿಶೇಷ ನೃತ್ಯ ಪ್ರದರ್ಶನ ನೀಡಲಿ ಎಂದು ನೆಟ್ಟಿಗರು ಮೆಚ್ಚುಗೆ ಮೂಲಕ ಕೋರಿದ್ದಾರೆ.
https://www.youtube.com/watch?v=V05MbgRwbsI&feature=youtu.be