ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಮನಬಿಚ್ಚಿ ಕುಣಿಯುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿರುವುದು ಆಕೆಯ ಸ್ಟೆಪ್ ಕಾರಣಕ್ಕಲ್ಲ. ಆಕೆಯ ಹಿಂದೆ ಇರುವ ವ್ಯಕ್ತಿಯೂ ಆಕೆಯಂತೆಯೇ ಸ್ಟೆಪ್ ಅನುಕರಿಸಲು ಪ್ರಯತ್ನಿಸುತ್ತಾನೆ. ಇದು ನೆಟ್ಟಿಗರ ಗಮನ ಸೆಳೆದಿದೆ.
ಟ್ವಿಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಸಂಜಯ್ ಕಪೂರ್ ನಾಯಕನಾಗಿ ನಟಿಸಿರುವ ಸಿರ್ಫ್ ತುಮ್ ಚಿತ್ರದ ಸುಶ್ಮಿತಾ ಸೇನ್ ಅವರ ಜನಪ್ರಿಯ ಗೀತೆ ದಿಲ್ಬರ್……. ದಿಲ್ಬರ್……ಗೆ ಯುವತಿ ನೃತ್ಯ ಮಾಡುವುದನ್ನು ಕಾಣಬಹುದು.
ಆಕೆಯ ಅರಿವಿಗೆ ಬಾರದಂತೆ ಹಿಂದಿದ್ದ ವ್ಯಕ್ತಿ ಕೂಡ ಸೊಂಟ, ಕೈ ತಿರುಗಿಸುತ್ತಾ ಸ್ಟೆಪ್ ಹಾಕುತ್ತಾನೆ. ಅಲ್ಲಿದ್ದ ಜನರೆಲ್ಲರೂ ಕೂಡ ಇವರಿಬ್ಬರ ಡ್ಯಾನ್ಸ್ ನೋಡುತ್ತಾ ನಿಂತುಬಿಡುತ್ತಾರೆ. ಅವರು ನೃತ್ಯ ಮಾಡಿದ ಸ್ಥಳ ಮಾರುಕಟ್ಟೆಯಂತೆ ಕಾಣಿಸುತ್ತದೆ.
ಈ ವಿಡಿಯೋವನ್ನು ಗಮನಿಸಿದ ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬರಂತೂ, ಹಹಹ್ಹ….. ನಾನು ನಿಜವಾಗಿ ಅಲ್ಲಿದ್ದರೆ ನಗುತ್ತಾ ಸಾಯುತ್ತಿದ್ದೆ ….. ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಮಾಡಿದ ನಂತರ 2.59 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.