ದೇಶ ಸುತ್ತು, ಕೋಶ ಓದು ಅನ್ನೋ ಮಾತಿದೆ. ಹಾಗೆಯೇ ಕೆಲವರಿಗೆ ಪ್ರವಾಸಕ್ಕೆ ಹೋಗುವ ತಿರುಗಾಡುವ ಆಸೆಯಿರುತ್ತದೆ. ಇಲ್ಲೊಬ್ಬಳು ಮಹಿಳೆ ಕೂಡ ಪ್ರವಾಸಕ್ಕಾಗಿ ತನ್ನ ಕಾರನ್ನೇ ಕ್ಯಾಂಪರ್ ವ್ಯಾನ್ ಆಗಿ ಬದಲಾಯಿಸಿಲು ನಿರ್ಧರಿಸಿದ್ದಾಳೆ.
ಹೌದು, ಇಂಗ್ಲೆಂಡ್ ನ ಹನ್ನಾ ಎಂಬ ಮಹಿಳೆ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಈಕೆಗೆ ಕ್ಯಾಂಪರ್ ವ್ಯಾನ್ ನಲ್ಲಿ ಪ್ರಯಾಣಿಸಬೇಕು ಅನ್ನೋ ಮನಸ್ಸಿರುತ್ತದೆ. ಆದರೆ ಈ ವ್ಯಾನ್ ಗೆ ಅಧಿಕ ವೆಚ್ಚವಾಗುವುದರಿಂದ ತನ್ನ ಕಾರನ್ನೇ ಕ್ಯಾಂಪರ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದಾಳೆ.
ಊಟಕ್ಕೆ ಹೋದವನು ಬಂದಿದ್ದು 14 ವರ್ಷಗಳ ಬಳಿಕ….!
ಇದಕ್ಕಾಗಿ 150 ಪೌಂಡ್ ಅಂದರೆ 15,483 ರೂ. ಖರ್ಚು ಮಾಡಿ, ತನ್ನ ಫಿಯೆಟ್ 500 ಕಾರನ್ನೇ ಸಣ್ಣ ಮನೆಯನ್ನಾಗಿ ಪರಿವರ್ತಿಸಿದ್ದಾಳೆ. ಮಲಗಲು ಹಾಸಿಗೆ, ಕೂರಲು ಸ್ಥಳ ಎಲ್ಲವೂ ಇದರಲ್ಲಿದೆ. ಈ ಮೂಲಕ ಜಗತ್ತಿನ ಅತ್ಯಂತ ಚಿಕ್ಕ ಕ್ಯಾಂಪ್ ವ್ಯಾನ್ ಹೊಂದಿರುವ ಬಿರುದು ಈಕೆಗೆ ಲಭಿಸಿದೆ.
ಅಷ್ಟೇ ಅಲ್ಲ ಈಕೆಯ ಕನಸಿನ ಮೊಬೈಲ್ ಮನೆಯಲ್ಲಿ ಬೇರೆ ಯಾರಿಗೂ ಕೂಡ ಜಾಗ ಕೊಡುವುದಿಲ್ಲವಂತೆ. ತನ್ನ ಗೆಳೆಯನಿಗೂ ಕೂಡ ಪ್ರವೇಶವಿಲ್ಲವಂತೆ. ಇನ್ನು ತನ್ನ ಮುಂದಿನ ಪ್ರವಾಸದ ಬಗ್ಗೆ ಮಾತನಾಡುತ್ತಾ, ಆಕರ್ಷಕ, ಸುಂದರ ಸ್ಥಳಗಳಿಗೆ ಹೋಗಲು ಬಯಸುವುದಾಗಿ ಹನ್ನಾ ಹೇಳಿಕೊಂಡಿದ್ದಾಳೆ.