ಉತ್ತರಪ್ರದೇಶದಲ್ಲಿ 2006ರಲ್ಲಿ ವರದಿಯಾದ ನಿಥಾರಿ ಪ್ರಕರಣ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಅಮಾಯಕ ಮಕ್ಕಳ ಹತ್ಯೆಯ ಜತೆಗೆ ನರಭಕ್ಷಕತನ ಬಯಲಾಗಿದ್ದು ಪೊಲೀಸರು ಹಾಗೂ ಸಾರ್ವಜನಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಇಂತಹ ಘಟನೆಯನ್ನೇ ಹೋಲುವಂತೆ ನರಭಕ್ಷಕ ಮಹಿಳೆಯೊಬ್ಬರು ಜನರನ್ನು ಕೊಂದು ಮಾಂಸವನ್ನು ತಿನ್ನುತ್ತಿದ್ದಳು ಮತ್ತು ಅದರಿಂದ ಉಪ್ಪಿನಕಾಯಿಯನ್ನು ಸಹ ಮಾಡುತ್ತಿದ್ದಳು. ಜನರನ್ನ ಬೆಚ್ಚಿಬೀಳಿಸುವಂತಹ ಇಂತಹ ಕೃತ್ಯವೆಸಗುತ್ತಿದ್ದ ಮಹಿಳೆಯ ಹೆಸರು ನಟಾಲಿಯಾ, ಮತ್ತು ಅವಳ ಗಂಡನ ಹೆಸರು ಡಿಮಿಟ್ರಿ ಬಕ್ಷೇವ್. ಅವರು ರಷ್ಯಾದ ಕ್ರಾಸ್ನೋಡರ್ ನಗರದಲ್ಲಿ ವಾಸಿಸುತ್ತಿದ್ದರು. ಅವರಿಬ್ಬರೂ ನರಭಕ್ಷಕರು ಎಂದು ವರದಿಯಾಗಿದೆ.
ನಟಾಲಿಯಾ ಮೊದಲು ಜನರನ್ನು ಕೊಂದು ನಂತರ ಅವರ ಮಾಂಸವನ್ನು ಫ್ರೀಜರ್‌ನಲ್ಲಿ ಸಂಗ್ರಹಿಸುತ್ತಿದ್ದಳು. ನಂತರ ಅವಳು ಈ ಮಾಂಸದಿಂದ ಉಪ್ಪಿನಕಾಯಿಗಳನ್ನು ತಯಾರಿಸಿ ಬಹಳ ರುಚಿಯಿಂದ ಸೇವಿಸುತ್ತಿದ್ದಳು ಈ ಬಗ್ಗೆ ಜನರು ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದಾಗ ಪೊಲೀಸರು ಅನುಮಾನದ ಆಧಾರದ ಮೇಲೆ ಅವರನ್ನು ಬಂಧಿಸಿದರು. ಪೊಲೀಸರ ತನಿಖೆಯಲ್ಲಿ ಎಂಟು ಜನರ ದೇಹದ ಭಾಗಗಳು ಪತ್ತೆಯಾಗಿದ್ದವು. ಹೆಚ್ಚುವರಿಯಾಗಿ ಮನುಷ್ಯರ ಮಾಂಸದ ಉಪ್ಪಿನಕಾಯಿಗಳನ್ನು ಸಹ ಕಂಡುಹಿಡಿಯಲಾಗಿತ್ತು.
ಮಹಿಳೆ ವೃತ್ತಿಯಲ್ಲಿ ನರ್ಸ್ ಆಗಿದ್ದು ಇಂತಹ ಕೃತ್ಯವೆಸಗಲು ಸುಲಭವಾಗಿ ಅವಕಾಶ ಸಿಕ್ಕಂತಾಗಿತ್ತು. ಮೃತದೇಹಗಳನ್ನು ತನ್ನ ಪತಿಯ ಸಹಾಯದಿಂದ ಮನೆಗೆ ತರುತ್ತಿದ್ದಳು. ಪೊಲೀಸರು ಅವರನ್ನು ನರಭಕ್ಷಕರು ಎಂದು ಘೋಷಿಸಿದ್ದು ನ್ಯಾಯಾಲಯದಲ್ಲಿ ಅವರು ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ. ಸುಮಾರು 30 ಮಹಿಳೆಯರನ್ನು ಕೊಂದಿರುವುದಾಗಿ ಒಪ್ಪಿಕೊಂಡ ಅವರಿಗೆ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇಬ್ಬರೂ ಸಾವನ್ನಪ್ಪಿದ್ದು ಈ ಭಯಾನಕ ಘಟನೆಯು ಎಲ್ಲರನ್ನು ಬೆಚ್ಚಿ ಬೀಳಿಸಿತು.