
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಮೈಸೂರಿನ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ತನಗೆ ಹಾಗೂ ತನ್ನ ತಾಯಿಗೆ ಕೊಲೆ ಮಾಡುವುದಾಗಿ ಡಾಬಾ ಜಯಕುಮಾರ್ ಹಾಗೂ ಸ್ನೇಹಮಯಿ ಕೃಷ್ಣ ಎಳೆದಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಂಜನಗೂಡು ಬಸವಣ್ಣ ಬಡಾವಣೆ ನಿವಾಸಿ ಲಾವಣ್ಯ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
2016ರಲ್ಲಿ ಮೈಸೂರಿನ ಗೋಕುಲಂ ನಿವಾಸಿ ಜಯಕುಮಾರ್ ಎಂಬವರೊಂದಿಗೆ ನನ್ನ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇದೆ. 2020 ರಲ್ಲಿ ಪತಿ ಅಪಘಾತದಲ್ಲಿ ತೀರಿಕೊಂಡ ನಂತರ ಅತ್ತೆ ಪ್ರಭಾ, ಮಾವ ಸಿದ್ದಪ್ಪ ಕಿರುಕುಳ ನೀಡುತ್ತಿದ್ದರು. ಕಿರುಕುಳ ಸಹಿಸಲಾರದೆ ತವರು ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದೇನೆ. ನನ್ನ ಅತ್ತೆ ಮತ್ತು ಮಾವನ ಕುಮ್ಮಕ್ಕಿನಿಂದ ಡಾಬಾ ಜಯಕುಮಾರ್ ಹಾಗೂ ಸ್ನೇಹಮಯಿ ಕೃಷ್ಣ ನನ್ನನ್ನು ಮತ್ತು ನನ್ನ ತಾಯಿಯನ್ನು ಎಳೆದಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.