
ಹೌದು, ರಿಕ್ಷಾ ಚಾಲಕರು, ಕೂಲಿ ಕೆಲಸ ಮಾಡುವವರು ಮುಂತಾದವರೊಂದಿಗೆ ಗೆಳೆಯ ಮಾತನಾಡುವುದು ಆಕೆಗೆ ಚೂರೂ ಸರಿಹೊಂದುವುದಿಲ್ಲವಂತೆ. ತನ್ನ ಗೆಳೆಯ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ದೊಡ್ಡ ಸಂಸ್ಥೆಯಲ್ಲಿ ದುಡಿಯುತ್ತಿದ್ದು, ಉತ್ತಮವಾದ ಆದಾಯವೂ ಬರುತ್ತಿದೆ. ಆದರೆ ಅವನು ರಿಕ್ಷಾ ಚಾಲಕರು ಮತ್ತು ವೇಟರ್ಗಳೊಂದಿಗೆ ಮಾತನಾಡುತ್ತಾನೆ. ಅಲ್ಲದೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಾನೆ. ತನ್ನ ಬಾಯ್ಫ್ರೆಂಡ್ ನನ್ನು ಹೆಚ್ಚು ಮಾಡರ್ನ್ ಆಗಿ ಮಾಡುವುದು ಹೇಗೆ? ಎಂದು ಯುವತಿ ಪ್ರಶ್ನಿಸಿದ್ದಾಳೆ.
ಯುವತಿಯ ಈ ಪೋಸ್ಟ್ ಆನ್ಲೈನ್ನಲ್ಲಿ ಪ್ರತಿಕ್ರಿಯೆಗಳ ಅಲೆಯನ್ನೇ ಉಂಟು ಮಾಡಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು ಆಕೆಯ ಈ ಹೇಳಿಕೆಗಳ ಬಗ್ಗೆ ಜಿಗುಪ್ಸೆಗೊಂಡಿದ್ದಾರೆ. ಯುವಕ ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳಬಾರದು ಅಂತಾ ಕೆಲವರು ಸಲಹೆ ನೀಡಿದರು.