ಇಂಡೋನೇಷ್ಯಾದ ಆಚೆ ಪ್ರಾಂತ್ಯದಲ್ಲಿ ಡೆಮಾಕ್ರಟಿಕ್ ಕಾನೂನಿನ ಬದಲು ಇಸ್ಲಾಮಿಕ್ ಕಾನೂನು ಜಾರಿಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಮತ್ತು ಶಿರಚ್ಛೇದನ ಶಿಕ್ಷೆ ನೀಡಲಾಗುತ್ತದೆ. ಅಕ್ರಮ ಸಂಬಂಧ ಬೆಳಕಿಗೆ ಬಂದ್ರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಇತ್ತೀಚಿಗೆ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮದುವೆಗೆ ಮೊದಲು ದೈಹಿಕ ಸಂಬಂಧವನ್ನು ಹೊಂದಿದ್ದಕ್ಕಾಗಿ ಮಹಿಳೆಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ನೂರಾರು ಚಡಿ ಏಟು ತಿಂದ ನಂತ್ರ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಷರಿಯಾ ಕಾನೂನಿನ ಶಿಕ್ಷೆಯಿಂದಾಗಿ ಸ್ಥಳೀಯ ಜನರಲ್ಲಿ ಭೀತಿಯ ವಾತಾವರಣವಿದೆ. ಗೊತ್ತಾಗದೆ ತಪ್ಪಾದ್ರೂ ಕಠಿಣ ಶಿಕ್ಷೆ, ಸಾವು ಎದುರಿಸಬೇಕೆಂದು ಜನರು ಭಯದಲ್ಲಿ ಜೀವನ ನಡೆಸುತ್ತಾರೆ.
ಇಂಡೋನೇಷ್ಯಾದಲ್ಲಿ ಇಸ್ಲಾಮಿಕ್ ಕಾನೂನನ್ನು ಹೇರುವ ಏಕೈಕ ಪ್ರದೇಶ ಆಚೆ. ಇಲ್ಲಿ ಕಳ್ಳತನ, ವೇಶ್ಯಾವಾಟಿಕೆ, ವಿವಾಹಪೂರ್ವ ಲೈಂಗಿಕತೆ, ಸಲಿಂಗಕಾಮದ ವಿರುದ್ಧ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಕಣ್ಣೆದುರಿನಲ್ಲಿ ಏನೇ ನಡೆದ್ರೂ ಇಲ್ಲಿನ ಜನರು ಪ್ರತಿಕ್ರಿಯೆ ನೀಡುವಂತಿಲ್ಲ. ಆಚೆಯಲ್ಲಿ ಜಾರಿಯಲ್ಲಿರುವ ಇಸ್ಲಾಮಿಕ್ ಕಾನೂನನ್ನು ಕೊನೆಗೊಳಿಸುವಂತೆ ಅನೇಕ ಕೂಗು ಕೇಳಿ ಬಂದಿದೆ. 2018ರಿಂದಲೇ ಈ ಬಗ್ಗೆ ಅನೇಕ ಪ್ರಯತ್ನ ನಡೆಯುತ್ತಿದೆ. ಆದ್ರೆ ಈವರೆಗೂ ಇಲ್ಲಿ ಷರಿಯತ್ ಕಾನೂನು ಜಾರಿಯಲ್ಲಿದೆ.