
ಪ್ರವಾಹದಲ್ಲಿ ತನ್ನ ಕಾರು ಕೊಚ್ಚಿ ಹೋದ ಬಳಿಕ ಮರವೊಂದಕ್ಕೆ ತಗುಲಿಹಾಕಿಕೊಂಡು ಪರದಾಡುತ್ತಿದ್ದ ಮಹಿಳೆಯೊಬ್ಬರನ್ನು ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್ ಅಗ್ನಿಶಾಮಕ ಸಿಬ್ಬಂದಿ ಕಾಪಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋರ್ಟ್ ವರ್ತ್ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳ ತುಂಬೆಲ್ಲಾ ನೀರು ತುಂಬಿಕೊಂಡಿತ್ತು. ಇದರ ನಡುವೆಯೇ ತಮ್ಮ ಕಾರನ್ನು ಓಡಿಸಿಕೊಂಡು ಹೋಗಲು ಯತ್ನಿಸಿದ ಈ ಮಹಿಳೆಗೆ, ಆಕೆಯ ಕಾರು ನೀರಿನಲ್ಲಿ ಕೊಚ್ಚಿಹೋಗಿದೆ.
ಇದೇ ವೇಳೆ ಕಾರಿನಿಂದ ಹೊರಗೆ ಹಾರಿದ ಈಕೆ ಮರವೊಂದರ ರೆಂಬೆಗಳಿಗೆ ತಗುಲಿಹಾಕಿಕೊಂಡು ತೇಲಾಡಲು ಸಫಲಳಾಗಿದ್ದಾಳೆ. ಸ್ಥಳದಲ್ಲೇ ಇದ್ದ ರಕ್ಷಣಾ ಸಿಬ್ಬಂದಿಯೊಬ್ಬರು ಆಕೆಯತ್ತ ಹಗ್ಗ ಎಸೆದು ಆಕೆಯನ್ನು ಸುರಕ್ಷಿತ ದಡಕ್ಕೆ ತಲುಪಿಸಿದ್ದಾರೆ.