ಅಮೆರಿಕದಲ್ಲಿ ಮಹಿಳೆಯೊಬ್ಬರು ಬಂಗಾಳ ಹುಲಿಯನ್ನು ಸ್ಪರ್ಶಿಸಲು ಹೋಗಿ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಹುಲಿ ಇರುವ ಜಾಗಕ್ಕೆ ಹೋಗಿ, ಅದನ್ನು ಸ್ಪರ್ಶಿಸಲು ಮುಂದಾಗಿದ್ದಾಳೆ. ಆಗ ಹುಲಿ, ಮಹಿಳೆ ಮೇಲೆ ದಾಳಿ ನಡೆಸಲು ಮುಂದಾಗಿದೆ. ತಕ್ಷಣ ಕೈ ಹಿಂದಕ್ಕೆ ಎಳೆದುಕೊಂಡ ಮಹಿಳೆ, ಗೇಟ್ ಹಾರಿ ಹೊರಗೆ ಹೋಗಿದ್ದಾರೆ.
ನ್ಯೂಜೆರ್ಸಿಯ ಕೊಹಂಜಿಕ್ ಮೃಗಾಲಯದಲ್ಲಿ ಘಟನೆ ನಡೆದಿದೆ. ಬ್ರಿಡ್ಜ್‌ಟನ್ ಪೊಲೀಸ್ ಇಲಾಖೆಯ ಪ್ರಕಾರ, ಮಹಿಳೆಯು ಹುಲಿಯನ್ನು ಸ್ಪರ್ಶಿಸಲು ಪ್ರಯತ್ನಿಸಿದಾಗ, ಅದು ಅವಳ ಮೇಲೆ ದಾಳಿ ಮಾಡಿದೆ. ಅದರಲ್ಲಿ ಅವಳು ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ವೈರಲ್ ವಿಡಿಯೋದಲ್ಲಿ, ಮಹಿಳೆ ಬೇಲಿ ಮಧ್ಯೆ ಬೆರಳು ಹಾಕಿ ಹುಲಿಯನ್ನು ಚುಡಾಯಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. USATODAY ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ನ್ಯೂಜೆರ್ಸಿಯ ಮೃಗಾಲಯದಲ್ಲಿ ಹುಲಿ ದಾಳಿಯಿಂದ ಮಹಿಳೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಹಿಳೆ ಹುಲಿಯ ಆವರಣದೊಳಗೆ ಹೋಗಿ ಜಾಲರಿಯ ಮೂಲಕ ಕೈ ಹಾಕಿ ಅದನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಳು ಎಂದು ಶೀರ್ಷಿಕೆ ಹಾಕಲಾಗಿದೆ.