ತನ್ನ ಪತಿಯ ಅಚ್ಚುಮೆಚ್ಚಿನ ದಿಂಬುಗಳನ್ನು ಐದು ವರ್ಷಗಳ ಬಳಿಕ ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದನ್ನು ಮಹಿಳೆಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ವಾಶರ್‌ಗೆ ಹಾಕುವ ಮೊದಲು ಕಂದು ಬಣ್ಣದಲ್ಲಿದ್ದ ಈ ದಿಂಬುಗಳನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡಲಾಗಿತ್ತು. ಈ ವೇಳೆ ಅಗಾಧವಾಗಿ ವಾಶಿಂಗ್ ಡಿಟರ್ಜೆಂಟ್‌ಅನ್ನು ಬಳಸಲಾಗಿದೆ.
ಮಳೆಹಾನಿ ಸಂತ್ರಸ್ಥರಿಗೆ ಪರಿಹಾರ ಘೋಷಣೆ: ಮನೆ ಹಾನಿಗೆ 5 ಲಕ್ಷ ರೂ., ಬಟ್ಟೆಬರೆ ಹಾನಿಗೆ 10 ಸಾವಿರ ರೂ.
ಇದಾದ ಮೇಲೆ ಆಕ್ಸಿ ಕ್ಲೀನ್ ಕಲೆ ನಿವಾರಕ ಸೇರಿಸಿದ ಮಹಿಳೆ, ಅದನ್ನು ಒಂದಿಡೀ ದಿನ ನೆನೆಯಲು ಬಿಟ್ಟಿದ್ದಾರೆ.
24 ಗಂಟೆಗಳ ಬಳಿಕ ದಿಂಬುಗಳನ್ನು ಹಿಂಡಿದಾಗ ನೀರಿನಲ್ಲಿ ಭಾರೀ ಕೊಳಕು ಬಿಟ್ಟು ಸೇರಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.