ದೆವ್ವ-ಭೂತವನ್ನು ಅನೇಕರು ನಂಬುತ್ತಾರೆ. ಕ್ಯಾಮರಾ ಕಣ್ಣಿಗೆ ದೆವ್ವ ಸೆರೆಯಾಗಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೆವ್ವ ನೋಡಿದ್ದೇವೆ ಎನ್ನುತ್ತಾರೆ. ಈ ಎಲ್ಲದರ ಮಧ್ಯೆ ಅಮೆರಿಕಾದ ಕ್ಯಾಥ್ಲೀನ್ ರಾಬರ್ಟ್ಸ್ ಹೆಸರಿನ ಮಹಿಳೆ ವಿಚಿತ್ರ ಹೇಳಿಕೆ ನೀಡಿದ್ದಾಳೆ. ದಿವಂಗತ ಡಾನ್ಸರ್, ಮೈಕಲ್ ಜಾಕ್ಸನ್ ಭೂತದ ಜೊತೆ ಕ್ಯಾಥ್ಲೀನ್ ಮದುವೆಯಾಗಿದೆಯಂತೆ.
ಇಷ್ಟೇ ಅಲ್ಲ, ಮೈಕಲ್ ಜಾಕ್ಸನ್ ತನ್ನ ಮೈಮೇಲೆ ಬರ್ತಾರೆಂದು ಆಕೆ ಹೇಳಿದ್ದಾಳೆ. ಬಾತ್ ರೂಮಿಗೆ ಹೋದಾಗೆಲ್ಲ ಮೈಕಲ್ ಜಾಕ್ಸನ್ ಭೂತ, ಮೈಮೇಲೆ ಬರುತ್ತದೆಯಂತೆ. ಡಾನ್ಸ್ ಮಾಡುವುದು, ಹಾಡು ಹೇಳುವ ಭೂತ, ತನಗಿಷ್ಟವಾದ ಆಹಾರ ಸೇವನೆ ಮಾಡುತ್ತದೆಯಂತೆ. ಲೈಂಗಿಕ ಸಂಬಂಧದ ಬಗ್ಗೆ ಮಾತನಾಡಿದ ಕ್ಯಾಥ್ಲೀನ್, ಮೈಕಲ್ ಭೂತವನ್ನು ಈವರೆಗೂ ಸ್ಪರ್ಶಿಸಿಲ್ಲ. ಹಾಗೆ ಚುಂಬಿಸಿಲ್ಲವೆಂದಿದ್ದಾಳೆ.
ಕ್ಯಾಥ್ಲೀನ್ ಇದಕ್ಕೂ ಮೊದಲು, ತಾನು ಹಿರಿಯ ನಟಿ ಮರ್ಲಿನ್ ಮನ್ರೋ ಅವತಾರ ಎಂದಿದ್ದಳು. ಕ್ಯಾಥ್ಲೀನ್ ಟಿಕ್‌ಟಾಕ್ ವಿಡಿಯೋದಲ್ಲಿ ಸಕ್ರಿಯವಾಗಿದ್ದಾಳೆ. ವಿಡಿಯೋ ಮೂಲಕವೇ ಈ ವಿಷ್ಯವನ್ನು ಆಕೆ ಹೇಳಿದ್ದಾಳೆ.