ವಿಲಕ್ಷಣ ಮತ್ತು ಆತಂಕಕಾರಿ ಘಟನೆಯೊಂದರಲ್ಲಿ ಸ್ಪ್ಯಾನಿಷ್ ಯುವತಿಯೊಬ್ಬಳು ಹಲ್ಲುಜ್ಜುವ ಬ್ರಷ್ ಅನ್ನು ತಿಂದು ತನ್ನನ್ನು ತಾನೇ ಉಸಿರುಗಟ್ಟಿಸಿಕೊಂಡು ಸಾಯುವ ಹಂತಕ್ಕೆ ಹೋಗಿದ್ದಳು.
ಹೈಜಿಯಾ ಎಂದು ಗುರುತಿಸಲ್ಪಟ್ಟ 21 ವರ್ಷದ ಯುವತಿ ಹಲ್ಲುಜ್ಜುವ ಬ್ರಷ್ ಅನ್ನು ಅಚಾನಕ್ಕಾಗಿ ನುಂಗಿಬಿಟ್ಟಿದ್ದಳು. ಅದನ್ನು ಹೊರಹಾಕಲು ಸಾಕಷ್ಟು ಪ್ರಯತ್ನಿಸಿದಳು.
ಆದರೆ ಅದು ಹೊರಗೆ ಬರದೇ ಗಂಟಿನೊಳಕ್ಕೆ ಇಳಿಯುತ್ತಾ ಹೋಯಿತು. ಇದರಿಂದ ಗಾಬರಿಗೊಂಡ ಆಕೆ ತಕ್ಷಣ ವೈದ್ಯರನ್ನು ಸಂಪರ್ಕಿಸಿದಳು. ಹತ್ತಿರದ ಆಸ್ಪತ್ರೆಗೆ ಧಾವಿಸಿ ಘಟನೆಯನ್ನು ವಿವರಿಸಿದಳು.
ವಿಷಯ ತಿಳಿದ ವೈದ್ಯರು ಮೊದಲು ಎಕ್ಸ್ ರೇ ತೆಗೆದರು. ಇದರಲ್ಲಿ ಬ್ರಶ್ ಇರುವುದು ಸ್ಪಷ್ಟವಾಗಿದ್ದು ಆಕೆಯನ್ನು ಸತತ 3 ಗಂಟೆಗಳ ಕಾಲ ವೈದ್ಯಕೀಯ ತಜ್ಞರು ಪರೀಕ್ಷಿಸಿದರು.
ಬಳಿಕ ಹಲ್ಲುಜ್ಜುವ ಬ್ರಷ್‌ನ ತಲೆಯನ್ನು ಶಸ್ತ್ರಚಿಕಿತ್ಸಾ ಉಪಕರಣದಿಂದ ಲೂಪ್ ಮಾಡುವ ಮೂಲಕ ಯುವತಿಯ ಬಾಯಿಯ ಮೂಲಕ ಅದನ್ನು ಹೊರತೆಗೆದರು. ಕೊನೆಗೂ ಬ್ರಶ್ ದೇಹದಿಂದ ಹೊರಬಂದಿದ್ದು ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ.