ಸಾಮಾನ್ಯವಾಗಿ ಸೂಪರ್ ಹೀರೋ ಬ್ಯಾಟ್ಮ್ಯಾನ್ನ ಎದುರಾಳಿಯಾಗಿ ಕಾಣಿಸಿಕೊಳ್ಳುವ ಸೂಪರ್ ವಿಲನ್ ಪಾಯ್ಸನ್ ಐವಿಯ ವಿಶೇಷ ಶಕ್ತಿ ಅನೇಕರಿಗೆ ಗೊತ್ತಿರಬಹುದು. ಆ ಪಾತ್ರದಲ್ಲಿ ಅವಳು ತನ್ನ ತುಟಿಗಳಿಗೆ ವಿಷ ಲೇಪಿಸಿಕೊಂಡು ಚುಂಬನದ ಮೂಲಕ ಯಾರನ್ನಾದರೂ ಕೊಲ್ಲಬಲ್ಲಳು. ಇದು ಕಾಲ್ಪನಿಕ ಕಥೆಯ ಭಾಗವಾದರೂ ಇಂತಹದ್ದೇ ಒಂದು ಘಟನೆ ನಡೆದು ಹೋಗಿದೆ.
ಅಮೆರಿಕಾದ ದಕ್ಷಿಣದಲ್ಲಿರುವ ಟೆನ್ನೇಸ್ಸಿಯ 33 ವರ್ಷದ ರಾಚೆಲ್ ಡಾಲಾರ್ಡ್ ಇದೀಗ ಮಾರಣಾಂತಿಕ ಮುತ್ತು ನೀಡಿರುವ ಆಪಾದನೆಗೆ ತುತ್ತಾಗಿದ್ದಾಳೆ. ಟೆನ್ನೇಸ್ಸಿ ಕರೆಕ್ಷನ್ ಡಿಪಾರ್ಟ್ಮೆಂಟ್ ನೀಡಿದ ಹೇಳಿಕೆಯ ಪ್ರಕಾರ, ಕೊಲೆಯ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಚೆಲ್, ತನ್ನ ಜೊತೆಗಾರ ಕೈದಿ ಜೋಶುವಾ ಬ್ರೌನ್ಗೆ ಮಾರಣಾಂತಿಕ ಚುಂಬನ ನೀಡಿದ್ದಾಳೆ.
ಈ ಸಾವಿನ ಬಳಿಕ ಟೆನ್ನೇಸ್ಸಿ ಜೈಲಿಗೆ ಮಾರಣಾಂತಿಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರೌನ್ ನನ್ನು ಟೆನ್ನೇಸ್ಸಿಯಲ್ಲಿರುವ ಟನಿರ್ ಸೆಂಟರ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಜೈಲಿನಲ್ಲಿ ಬಂಧಿಸಲಾಗಿತ್ತು.
ಇಬ್ಬರ ಭೇಟಿಯ ಸಮಯದಲ್ಲಿ ಬ್ರೌನ್ ಚುಂಬನ ಹಂಚಿಕೊಂಡಿದ್ದು, ಈ ವೇಳೆ ರಾಚೆಲ್ ಡ್ರಗ್ಸ್ ವರ್ಗಾವಣೆಯಾಗಿದೆ. ವರದಿಗಳ ಪ್ರಕಾರ, ರಾಚೆಲ್ ತನ್ನ ಬಾಯಿಯಲ್ಲಿ ಅರ್ಧ ಔನ್ಸ್ ಮೆತ್ ಅನ್ನು ಬ್ರೌನ್ಗೆ ಕೊಟ್ಟಿದ್ದಳು. ರಾಚೆಲ್ ಡಾಲಾರ್ಡ್ಳನ್ನು ಪ್ರಸ್ತುತ ಹಿಕ್ಮನ್ ಕೌಂಟಿ ಜೈಲಿನಲ್ಲಿ ಬಂಧಿಸಿಡಲಾಗಿದೆ.