ನ್ಯೂಯಾರ್ಕ್: ಬಾಲಕನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಯುವತಿ ಗರ್ಭಿಣಿಯಾಗಿದ್ದಾಳೆ ಎಂದು ಗೊತ್ತಾಗಿದೆ. 23 ವರ್ಷದ ಬ್ರಿಟ್ನಿ ಗ್ರೇ 14 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾಳೆ.
ಆರ್ಕಾನಸ್ ಪರಾಗೌಲ್ಡ್ ಪ್ರದೇಶದ ನಿವಾಸಿಯಾಗಿರುವ ಬ್ರಿಟ್ನಿ ಗ್ರೇ 2020ರ ಸೆಪ್ಟೆಂಬರ್ನಲ್ಲಿ 14 ವರ್ಷದ ಬಾಲಕನನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ ವೇಳೆ ಸಿಕ್ಕಿಬಿದ್ದಿದ್ದಳು.
ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆಕೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಆಕೆ ಬಾಲಕನಿಂದಲೇ ಗರ್ಭಿಣಿಯಾಗಿದ್ದಾಳೆ ಎಂದು ಕೋರ್ಟ್ ಗೆ ತಿಳಿಸಿದ್ದಾರೆ. ಅಲ್ಲದೇ ವೈದ್ಯಕೀಯ ವರದಿಯಲ್ಲಿಯೂ ಆಕೆ ಬಾಲಕನಿಂದಲೇ ಗರ್ಭಿಣಿಯಾಗಿದ್ದಾಳೆ ಎನ್ನುವುದು ದೃಢಪಟ್ಟಿದೆ.
ಒಂದು ವರ್ಷದಿಂದ ಬಾಲಕನೊಂದಿಗೆ ಬ್ರಿಟ್ನಿ ಗ್ರೇ ದೈಹಿಕ ಸಂಬಂಧ ಹೊಂದಿದ್ದಳು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಬಾಲಕನೊಂದಿಗೆ ಬ್ರಿಟ್ನಿ ಗ್ರೇ ಆಸ್ಪತ್ರೆಗೆ ಭೇಟಿ ನೀಡಿದ್ದ ವಿಡಿಯೋವನ್ನು ಕೂಡ ಕೋರ್ಟ್ ಗೆ ನೀಡಲಾಗಿದ್ದು, ಪೊಲೀಸರು ಕೂಡ ಆಕೆ ಗರ್ಭಿಣಿಯಾಗಿರುವ ಬಗ್ಗೆ ವರದಿ ನೀಡಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆಕೆಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 23 ಕ್ಕೆ ವಿಚಾರಣೆ ಮುಂದೂಡಲಾಗಿದೆ.