
ಪ್ರೇಯಸಿಗೆ ಸುಳ್ಳು ಹೇಳಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಪ್ರೇಯಸಿಗೆ ಫೋಟೋ ಕಳುಹಿಸಿದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಯುವಕ, ಮನೆಯಲ್ಲಿ ಸ್ನೇಹಿತರೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನೋಡುತ್ತಿದ್ದೇನೆ ಎನ್ನುತ್ತ ಫೋಟೋ ಕಳುಹಿಸಿದ್ದ. ಫೋಟೋ ಜೂಮ್ ಮಾಡಿ ನೋಡಿದಾಗ ಪ್ರೇಮಿಯ ಸತ್ಯ ಹೊರಬಿದ್ದಿದೆ.
ವರದಿಯ ಪ್ರಕಾರ, ಟಿಕ್‌ಟಾಕ್ ಕಲಾವಿದೆ ಮೇಗನ್ ಮೇರಿ, ಗೆಳೆಯ ಕಳುಹಿಸಿದ ಫೋಟೋವನ್ನು ಹಂಚಿಕೊಂಡಿದ್ದಾಳೆ. ಸ್ನೇಹಿತರೊಂದಿಗೆ ಒಲಿಂಪಿಕ್ಸ್ ವೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದ. ಫೋಟೋ ಜೂಮ್ ಮಾಡಿದಾಗ ಎಲ್ಲವೂ ಸ್ಪಷ್ಟವಾಯಿತು. ಪ್ರೇಮಿ, ಇನ್ನೊಬ್ಬಳ ಜೊತೆ ಸಂಬಂಧದಲ್ಲಿದ್ದಾನೆಂಬುದು ಸ್ಪಷ್ಟವಾಯಿತು ಎಂದು ಆಕೆ ಹೇಳಿದ್ದಾಳೆ. ಫೋಟೋದಲ್ಲಿ ರೆಡ್ ವೈನ್ ಗ್ಲಾಸ್ ಕಾಣಿಸಿದೆ. ಜೊತೆಗೆ ಹುಡುಗಿ ಮೊಣಕಾಲು ಕಾಣಿಸಿದೆ. ಇದ್ರಿಂದ ಬಾಯ್ ಫ್ರೆಂಡ್ ಸುಳ್ಳು ಹೇಳ್ತಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಹೇಳಿದ್ದಾಳೆ.
ಮೇಗನ್ ಪತ್ತೆದಾರಿ ಕೆಲಸ ಅನೇಕರಿಗೆ ಇಷ್ಟವಾಗಿದೆ. ಬಾಯ್ ಫ್ರೆಂಡ್ ಮೋಸವನ್ನು ಅನೇಕರು ಖಂಡಿಸಿದ್ದಾರೆ. ಮೇಗನ್, ಫೋಟೋದಲ್ಲಿ ಕೆಲ ಪುಸ್ತಕಗಳನ್ನೂ ನೋಡಿದ್ದಾಳೆ. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಫೋಟೋ ಜೂಮ್ ಮಾಡಿದಾಗ ಸತ್ಯ ಗೊತ್ತಾಯ್ತು ಎಂದು ಮೇಗನ್ ಹೇಳಿದ್ದಾಳೆ.