ಮೇಜರ್ ಲೀಗ್ ಪಂದ್ಯದಲ್ಲಿ ಬೇಸ್ ಬಾಲ್ ಹಿಡಿಯಲು ಅಮೆರಿಕಾದ ಮಹಿಳೆಯೊಬ್ಬಳು ಕೃತಕ ಕಾಲನ್ನು ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದಾರೆ.
ವರದಿಗಳ ಪ್ರಕಾರ, ಕನಿಷ್ಠ ಐದು ಬಿಯರ್‌ಗಳನ್ನು ಸೇವಿಸಿದ ನಂತರ, ವಿಶ್ವದ ಅತಿದೊಡ್ಡ ಲೀಗ್ ಒಂದರಲ್ಲಿ ಯಾವುದೇ ತಪ್ಪುಗಳಿಲ್ಲದೆ ಶಾನನ್ ಫ್ರೆಂಡ್ರೀಸ್ ಬೇಸ್ ಬಾಲ್ ಅನ್ನು ಹಿಡಿದಿದ್ದಾರೆ.
ಆಕೆ ತುಂಬಿದ ಕ್ರೀಡಾಂಗಣದ ವಾತಾವರಣವನ್ನು ಆನಂದಿಸುತ್ತಿದ್ದಾಗ ಬೇಸ್‌ಬಾಲ್ ತನ್ನ ಆಸನದ ಕಡೆಗೆ ಹಾರುವುದನ್ನು ಗಮನಿಸಿದ್ದಾಳೆ. ಅವಳು ತಕ್ಷಣ ತನ್ನ ಬಲಗಾಲನ್ನು ಹಿಡಿದು ಕ್ಯಾಚ್ ತೆಗೆದುಕೊಳ್ಳಲು ಅದನ್ನು ಹಿಡಿದಿದ್ದಾಳೆ.
ಚೆಂಡು ಸಂಪೂರ್ಣವಾಗಿ ಆಕೆ ಹಿಡಿದಿದ್ದ ಕೃತಕ ಕಾಲಿನ ಒಳಗೆ ಬಂದು ಬಿದ್ದಿದೆ. ಅಲ್ಲಿದ್ದ ಸುತ್ತಲಿನ ಪ್ರೇಕ್ಷಕರೆಲ್ಲಾ ಜೋರಾಗಿ ಬೊಬ್ಬೆ ಹೊಡೆದು ಹುರಿದುಂಬಿಸಿದ್ದಾರೆ. ಆದರೆ, ಹೋಮ್ ರನ್‌ಗಾಗಿ ಚೆಂಡನ್ನು ಹೊಡೆಯಲಾಗಿದೆಯೇ ಅಥವಾ ಯಾರೋ ಎಸೆದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲವಾದರೂ, ಶಾನನ್ ಅವರ ಸಮಯೋಚಿತ ಪ್ರತಿಕ್ರಿಯೆ ಮಾತ್ರ ವೈರಲ್ ಆಗಿದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳೊಂದಿಗೆ ವೈರಲ್ ಆಗಿತ್ತು. ಶ್ಯಾನನ್ ಅವರ ಕೌಶಲ್ಯದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=EQ9CiTwro9g&t=24s