ಪೋಷಕತ್ವವು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕೆಂದ್ರೆ ಕೆಲವೊಂದು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ತಮ್ಮ ಮಗುವಿಗೆ ಕೂಗದೆ ಅಥವಾ ಬಯ್ಯದೆ ಹೇಗೆ ಶಾಂತಗೊಳಿಸಬೇಕು ಎಂಬುದಕ್ಕೆ ಪರಿಪೂರ್ಣ ಉದಾಹರಣೆಯನ್ನು ನೀಡಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೀಡಾಗುವಂತೆ ಮಾಡಿದೆ.
ಚಳಿಗಾಲದಲ್ಲಿ ಹಾಲಿಗೆ ಶುಂಠಿ ಬೆರೆಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭ
ಇನ್‌ಸ್ಟಾಗ್ರಾಮ್‌ನಲ್ಲಿ ಡೆಸ್ಟಿನಿ ಬೆನೆಟ್ ಎಂಬುವವರು ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಮಗ ಕೋಪಗೊಂಡು ನಿಂತಿರುವಾಗ ತಾಯಿಯು ತನ್ನೆರಡು ಮೊಣಕಾಲುಗಳ ಮೇಲೆ ಕುಳಿತುಕೊಂಡು ಮಗುವಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾಳೆ. ಜೀವನ ಹೇಗೆ ಇರುತ್ತದೋ ಅದಕ್ಕೆ ನಾವು ಎಷ್ಟಾಗುತ್ತೋ ಅಷ್ಟು ಹೊಂದಿಕೊಳ್ಳಬೇಕಾಗುತ್ತದೆ ಎಂದು ವಿವರಿಸಿದ್ದಾಳೆ. ಆಕೆ ಎಲ್ಲಿಯೂ ತನ್ನ ಧ್ವನಿಯನ್ನು ಏರಿಸಿ ಮಾತನಾಡಲಿಲ್ಲ. ಕೊನೆಗೆ ತಾಯಿ-ಮಗ ಇಬ್ಬರೂ ಅಪ್ಪಿಕೊಂಡಿದ್ದಾರೆ.
ಈ ವಿಡಿಯೋ ಈಗ ವೈರಲ್ ಆಗಿದ್ದು, 268k ಮಂದಿ ವೀಕ್ಷಿಸಿದ್ದಾರೆ. ಹಾಗೂ ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ತಾಯಿ ತನ್ನ ಮಗುವಿಗೆ ಸಮಾಧಾನದಲ್ಲಿ ಹೇಳಿರುವ ಮಾತುಗಳು ನೆಟ್ಟಿಗರನ್ನು ಖುಷಿಪಡಿಸಿದೆ.
https://youtu.be/i7CofTHsF_0