
ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಈ ಘಟನೆ ಜರುಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ಚಿತ್ರವೊಂದರ ಜೊತೆಗೆ ಹಾಕಿರುವ ಸಂದೇಶದಲ್ಲಿ; “13ಎ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕೆ ಬೆಕ್ಕೊಂದಕ್ಕೆ ಎದೆ ಹಾಲುಣಿಸುತ್ತಿದ್ದು, ವಿಮಾನದ ಸಿಬ್ಬಂದಿ ಮನವಿ ಮಾಡಿಕೊಂಡರೂ ಬೆಕ್ಕನ್ನು ಕ್ಯಾರಿಯರ್‌ನಲ್ಲಿ ಇರಿಸುತ್ತಿಲ್ಲ,” ಎಂದು ತಿಳಿಸಲಾಗಿದೆ.
ಟಿಕ್‌ಟಾಕ್ ವಿಡಿಯೋವೊಂದರಲ್ಲಿ ಈ ವಿಚಾರದ ಕುರಿತು ಮಾತನಾಡಿದ ಫ್ಲೈಟ್ ಅಟೆಂಡೆಂಟ್ ಐನ್‌ಸ್ಲೇ ಎಲಿಜ಼ಬೆತ್, ನವೆಂಬರ್ 13ರಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
“ಈ ಮಹಿಳೆ ಬೆಕ್ಕನ್ನು ಬ್ಲಾಂಕೆಟ್ ಒಂದರ ಒಳಗೆ ಮಗುವಿನಂತೆ ಸುತ್ತಿಕೊಂಡಿದ್ದರು, ಹೀಗಾಗಿ ಅದು ಮಗುವಿನಂತೆ ಕಾಣುತ್ತಿತ್ತು. ಬೆಕ್ಕು ಪ್ರಾಣಭಯದಿಂದ ಅಂಗಲಾಚುತ್ತಿದ್ದರೂ ಅದನ್ನು ಮರಳಿ ಕ್ಯಾರಿಯರ್‌ನಲ್ಲಿ ಆಕೆ ಇಡುತ್ತಿರಲಿಲ್ಲ,” ಎಂದು ಹೇಳಿದ್ದಾರೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು ಡೆಲ್ಟಾ ಏವಿಯೇಷನ್ ’ರೆಡ್ ಕೋಟ್’ ತಂಡದ ಸಿಬ್ಬಂದಿಗೆ ಬಿಡಲಾಯಿತು. ರೆಡ್ ಕೋಟ್ ತಂಡವು ಡೆಲ್ಟಾದ ಅಂಗವಾಗಿದ್ದು, ಪ್ರಯಾಣಿಕರಿಗೆ ಸಂಬಂಧಿಸಿದ ವಿಚಾರಗಳನ್ನು ಸ್ಥಳದಲ್ಲೇ ಪರಿಹರಿಸುತ್ತದೆ.