ಯುವತಿಯೊಬ್ಬರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ತನ್ನ ಸಹೋದರನ ಹೆಸರನ್ನು ಗುರುತಿಸಿದ ಸಂದರ್ಭದಲ್ಲಿ ಭಾವುಕರಾದ ಕ್ಷಣದ ವಿಡಿಯೋ ವೈರಲ್ ಆಗಿದ್ದು. ನೆಟ್ಟಿಗರನ್ನು ಭಾವುಕರಾಗಿಸಿದೆ.
ಝೀರೋ ಬೀಯಿಂಗ್ ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಾಸ್ತವವಾಗಿ, ಅವರು ತಮ್ಮ ಪತ್ನಿ ಶಗುನ್ ಅವರೊಂದಿಗೆ ನವದೆಹಲಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು.
ಉಕ್ರೇನ್ ಯುದ್ಧ: ಮೇಕ್‌ಶಿಫ್ಟ್ ಬಾಂಬ್ ಶೆಲ್ಟರ್‌ನಲ್ಲಿ ನವಜಾತ ಶಿಶುಗಳ ಪಾಲನೆ
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು ಮೇಜರ್ ಅಜಯ್ ಸಿಂಗ್ ಜಸ್ರೋಟಿಯಾ ಅವರ ಹೆಸರಿನ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡುವಾಗ, ಶಗುನ್ ತನ್ನ ಸಹೋದರನ ಹೆಸರನ್ನು ಗೋಡೆಯ ಮೇಲೆ ಕೆತ್ತಿರುವುದನ್ನು ಗುರುತಿಸಿ ಭಾವುಕರಾಗಿಬಿಟ್ಟರು.
ಕ್ಯಾಪ್ಟನ್ ಕೆ.ಡಿ. ಸಂಬ್ಯಾಲ್ ಅವರ ಹೆಸರನ್ನು ಚಿನ್ನದ ಅಕ್ಷರದಲ್ಲಿ ಬರೆದಿರುವುದನ್ನು ನೋಡಿದ ನಂತರ ಆಕೆ ಭಾವೋದ್ವೇಗಕ್ಕೆ ಒಳಗಾದಳು ಮತ್ತು ಕಣ್ಣೀರು ಸುರಿಸಲು ಆರಂಭಿಸಿದರು. ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ಕ್ಯಾಪ್ಟನ್ ಕೆ.ಡಿ. ಸಂಬ್ಯಾಲ್ ಅವರು ಜಮ್ಮು ಮತ್ತು ಕಾಶ್ಮೀರದ ಸಾಂಬಾದವರು.
ನಾನು ಶಗುನ್‌ಗೆ ಕ್ಯಾಪ್ಟನ್ ವಿಜಯನ್ ಥಾಪರ್ ಸ್ಮಾರಕ ಕಂಡುಹಿಡಿಯೋಣ ಎಂದು ಹೇಳಿದೆ. ಅವನನ್ನು ಹುಡುಕುತ್ತಿರುವಾಗ ಇದ್ದಕ್ಕಿದ್ದಂತೆ ತನ್ನ ಸಹೋದರನ (ಕ್ಯಾಪ್ಟನ್ ಕೆ.ಡಿ. ಸಂಬ್ಯಾಲ್) ಹೆಸರು ಕಂಡುಕೊಂಡಳು ಮತ್ತು ಅವಳು ಉತ್ಸಾಹದಿಂದ ನನ್ನನ್ನು ಕರೆದು ಅದು “ಭಯ್ಯಾ ” ಹೆಸರು ಎಂದು ಹೇಳಿದಳು. ಶಗುನ್‌ಗೆ ಇಲ್ಲಿ ಹೆಸರು ಇರುವ ಬಗ್ಗೆ ತಿಳಿದಿರಲಿಲ್ಲ, ಅವಳ ಕುಟುಂಬಕ್ಕೂ ತಿಳಿದಿರಲಿಲ್ಲ, ಎಂದು ಪೋಸ್ಟ್‌ನ ಶೀರ್ಷಿಕೆ ಇದೆ.
https://youtu.be/4eygP2LiJ40