ಲಖನೌ: 6 ಮಕ್ಕಳ ತಾಯಿಯೊಬ್ಬಳು ಭಿಕ್ಷಿಕನ ಪ್ರೇಮದಲ್ಲಿ ಬಿದ್ದು, ಪತಿ, ಮಕ್ಕಳನ್ನು ತೊರೆದು ಆತನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 36 ವರ್ಷದ ಮಹಿಳೆ ರಾಜೇಶ್ವರಿ ಪತಿ ಹಾಗೂ 6 ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಪರಾರುಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಭಿಕ್ಷುಕನೊಬ್ಬ ಮನೆ ಬಳಿ ಆಗಾಗ ಭಿಕ್ಷೆ ಕೇಳುವ ನೆಪದಲ್ಲಿ ಮನೆ ಬಳಿ ಬರುತ್ತಿದ್ದ. ಆತನ ಜೊತೆ ಮಹಿಳೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎನ್ನಲಾಗಿದೆ. ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್ ಗೆ ಹೋಗಿದ್ದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.
ಪತ್ನಿ ಮನೆಗೆ ಬಾರದೇ ಕಂಗಾಲಾದ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರು ಆದರಿಸಿ ತನಿಖೆ ನಡೆಸಿದ ಪೊಲೀಸರಿಗೆ ಹೈಟೆಕ್ ಭಿಕ್ಷುಕನೊಂದಿಗೆ ಮಹಿಳೆ ಪರರೈಯಾಗಿರುವುದು ಗೊತ್ತಾಗಿದೆ.
ಪಂಡಿತ್ ಎಂಬ ಹೈಟೆಕ್ ಭಿಕ್ಷುಕ ಆಗಾಗ ಮನೆ ಬಳಿ ಬಂದು ಭಿಕ್ಷೆ ಕೇಳುವ ನೆಪದಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಿದ್ದ. ಭಿಕ್ಷುಕನ ಮೇಲೆ ಮಹಿಳೆಗೆ ಪ್ರೀತಿ ಚಿಗುರಿದ್ದು, ಇಬ್ಬರೂ ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಮಾತುಕತೆ ನಡೆಸುತ್ತಿದ್ದರು. ಹೀಗೆ ಆರಂಭವಾದ ಪ್ರೀತಿ ಮಹಿಳೆ ಪತಿ ಹಾಗೂ ಆರು ಮಕ್ಕಳನ್ನು ಬಿಟ್ಟು ಹೋಗಲು ಕಾರಣವಗಿದೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.