ತಿಂಗಳಿಗೆ 47 ಸಾವಿರ ರೂ. ನೀಡುತ್ತೇವೆಂದು ಪೋಷಕರು ಆಫರ್ ಮಾಡಿದ ಬಳಿಕ ಅವರ ಪುತ್ರಿ ಫುಲ್ ಟೈಂ ಮಗಳಾಗಿರೋ ಪ್ರಸಂಗ ಚೀನಾದಲ್ಲಿ ವರದಿಯಾಗಿದೆ.
ತಮ್ಮನ್ನು ನೋಡಿಕೊಳ್ಳಲು ಮಗಳಿಗೆ ತಿಂಗಳಿಗೆ 4,000 ಯುವಾನ್ (ಅಂದಾಜು ರೂ. 47,000) ನೀಡಲು ಮುಂದಾದ ನಂತರ ಮಗಳು ತನ್ನ ಕೆಲಸವನ್ನು ತೊರೆದಿದ್ದಾಳೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನ ವರದಿಯ ಪ್ರಕಾರ, 40 ವರ್ಷದ ನಿಯಾನಾನ್ ಎಂದು ಗುರುತಿಸಲ್ಪಟ್ಟ ಮಹಿಳೆ 15 ವರ್ಷಗಳ ಕಾಲ ಸುದ್ದಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. 2022 ರಲ್ಲಿ ಅವರ ಪಾತ್ರದಲ್ಲಿ ಬದಲಾವಣೆಗಳನ್ನು ಅನುಭವಿಸಿದ ನಂತರ ಹೆಚ್ಚಿನ ಒತ್ತಡ ಅನುಭವಿಸಿದರು.
ಇದನ್ನು ಗಮನಿಸಿದ ಮಹಿಳೆಯ ಪೋಷಕರು ಮಧ್ಯ ಪ್ರವೇಶಿಸಿ ಆಕೆಯನ್ನು ತಾವು ಆರ್ಥಿಕವಾಗಿ ನೋಡಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದರು.
“ನೀನು ನಿನ್ನ ಕೆಲಸವನ್ನು ಏಕೆ ಬಿಡಬಾರದು? ನಾವು ನಿಮ್ಮನ್ನು ಆರ್ಥಿಕವಾಗಿ ನೋಡಿಕೊಳ್ಳುತ್ತೇವೆ” ಎಂದು ಅವರು ಮಹಿಳೆಗೆ ಹೇಳಿದರು.
ಪೋಷಕರ ಈ ಪ್ರಸ್ತಾಪಕ್ಕೆ ಮಹಿಳೆ ಒಪ್ಪಿದ್ದು, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಹೆತ್ತವರಿಗೆ ಪೂರ್ಣ ಸಮಯದ ಮಗಳಾಗಲು ನಿರ್ಧರಿಸಿದಳು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಗೆ ತನ್ನ ದೈನಂದಿನ ದಿನಚರಿಯನ್ನು ಬಹಿರಂಗಪಡಿಸಿದ ಆಕೆ ಈಗ ಪ್ರತಿದಿನ ಒಂದು ಗಂಟೆ ತನ್ನ ಹೆತ್ತವರೊಂದಿಗೆ ನೃತ್ಯ ಮಾಡುವುದರೊಂದಿಗೆ ತನ್ನ ದಿನವನ್ನು ಪ್ರಾರಂಭಿಸೋದಾಗಿ ಹೇಳಿದ್ದಾಳೆ. ತನ್ನ ಹೆತ್ತವರೊಂದಿಗೆ ದಿನಸಿ ಖರೀದಿಸಲು ಹೋಗುವುದಾಗಿ ಹೇಳಿದ್ದಾರೆ.
ಪೋಷಕರೊಂದಿಗೆ ರಾತ್ರಿ ಊಟ ಮಾಡುವುದು, ಕಾರು ಚಾಲನೆ ಮಾಡುವುದು ಮತ್ತು ರಜಾದಿನಗಳನ್ನು ಆಯೋಜಿಸುವುದು ಸೇರಿದಂತೆ ಮುಂತಾದ ಇತರ ಜವಾಬ್ದಾರಿಗಳನ್ನು ಆಕೆ ತೆಗೆದುಕೊಂಡಿದ್ದಾಳೆ. ತನ್ನ ಪೋಷಕರೊಂದಿಗೆ ಸಮಯ ಕಳೆಯುವುದು ಚಿಕಿತ್ಸೆಯಿದ್ದಂತೆ ಎಂದು ಮಹಿಳೆ ಒಪ್ಪಿಕೊಂಡಿದ್ದಾರೆ.