alex Certify ರೀಲ್ಸ್‌ಗಾಗಿ ಮಗುವಿನ ಜೀವ ಪಣಕ್ಕಿಟ್ಟ ತಾಯಿ | Shocking Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್‌ಗಾಗಿ ಮಗುವಿನ ಜೀವ ಪಣಕ್ಕಿಟ್ಟ ತಾಯಿ | Shocking Video

ದೆಹಲಿಯಲ್ಲಿ ರೀಲ್ಸ್ ಮಾಡುವ ಭರದಲ್ಲಿ ಮಗುವಿನ ಜೀವವನ್ನೇ ಪಣಕ್ಕಿಟ್ಟ ಘಟನೆ ಬೆಳಕಿಗೆ ಬಂದಿದೆ. ವಾರ್ಷಾ ಯಾದವಂಶಿ ಎಂಬ ಮಹಿಳೆ ತನ್ನ ಪುಟ್ಟ ಮಗುವನ್ನು ಕಟ್ಟಡದ ಮೇಲ್ಛಾವಣಿಯ ಅಂಚಿನಲ್ಲಿ ಕೂರಿಸಿ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿಯ ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಮಗುವು ಮೇಲ್ಛಾವಣಿಯ ಅಂಚಿನಲ್ಲಿ ಕುಳಿತಿದ್ದು, ತಾಯಿ ಮಗುವನ್ನು ಒಂದು ಕೈಯಿಂದ ಹಿಡಿದುಕೊಂಡಿದ್ದಾಳೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮಗುವನ್ನು ಹೀಗೆ ಕೂರಿಸಿದ್ದು, ನೋಡುವವರ ಮೈ ನಡುಗಿಸುವಂತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಾಯಿಯ ವಿರುದ್ಧ ಕಿಡಿಕಾರಿದ್ದಾರೆ. “ಇಂತಹ ನಿರ್ಲಕ್ಷ್ಯದ ತಾಯಂದಿರನ್ನು ಶಿಕ್ಷಿಸಬೇಕು” ಎಂದು ಕೆಲವರು ಆಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಇಂತಹ ಅಪಾಯಕಾರಿ ವಿಡಿಯೋಗಳನ್ನು ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಈ ರೀತಿಯ ಕೃತ್ಯಗಳು ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತವೆ. ಇಂತಹ ಘಟನೆಗಳು ಸಮಾಜಕ್ಕೆ ಮಾರಕವಾಗಿದ್ದು, ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Vansinnig utmaning Загадочная головоломка: только 2% владельцев "супермозгов" могут Vad du ser först: optisk illusion avslöjar din självförtroende