ಕೆಲಸಕ್ಕೆ ರಾಜೀನಾಮೆ ಕೊಡುವ ವೇಳೆ ಹೇಗಿರಬೇಕು ಅನ್ನೋದರ ಬಗ್ಗೆ ಬಹುಶಃ ಯಾರೂ ಪ್ಲಾನ್ ಮಾಡಿರೋದಿಲ್ಲ. ಆದರೆ ಕೆಲ ದಿನಗಳ ಹಿಂದಷ್ಟೇ ಬೇಕರ್ ಆಗಬೇಕು ಅಂತಾ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಮಹಿಳೆ ತನ್ನ ಬಾಸ್ಗೆ ಕೇಕ್ ಮೂಲಕವೇ ರಾಜೀನಾಮೆ ವಿಚಾರವನ್ನ ತಿಳಿಸಿದ್ದಾಳೆ.
ತಾಶಾ ಸಿಂಗ್ ಎಂಬಾಕೆ ಕಳೆದ 8 ವರ್ಷಗಳಿಂದ ರಿಟೇಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಬೇಕಿಂಗ್ ಉದ್ಯಮವನ್ನ ಆರಂಭಿಸೋಣ ಎಂದು ಈ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಳು. ಹೀಗಾಗಿ ಬ್ರಿಟನ್ನ 32 ವರ್ಷದ ಈ ಮಹಿಳೆ ಕೇಕ್ ಮೂಲಕವೇ ರಾಜೀನಾಮೆ ವಿಚಾರವನ್ನ ರವಾನಿಸಿದ್ದಾಳೆ.
ನಿಮಗಾದ ನಷ್ಟದ ಬಗ್ಗೆ ಕ್ಷಮೆ ಯಾಚಿಸುತ್ತೇನೆ. ಈ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವವಳು ನಾನು ಎಂದು ಕೇಕ್ ಮೇಲೆ ಬರೆದಿದ್ದಾಳೆ. ಆಕೆಗೆ ಸಂಬಳವನ್ನ ತಡವಾಗಿ ನೀಡಿದ ಕಾರಣಕ್ಕೆ ಕೆಲಸಕ್ಕೆ ರಾಜಿನಾಮೆ ನೀಡಿದ್ದಾಳೆ. ಈ ಕೇಕ್ನ್ನು ಆಕೆ ಮಕ್ಕಳ ಜೊತೆ ಸೇರಿ ಸವಿದಿದ್ದಾಳೆ. ಈ ಕೇಕ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.