ಪತ್ನಿ ವಿನಿಮಯದ ಭಾಗವಾಗಲು ನಿರಾಕರಿಸಿದ್ದಕ್ಕಾಗಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಸೇರಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತ ಮಹಿಳೆ ತನ್ನ ಎಫ್‌ಐಆರ್‌ನಲ್ಲಿ, ಪತ್ನಿ ವಿನಿಮಯದಲ್ಲಿ ತೊಡಗಿಸಿಕೊಳ್ಳಲು ಮತ್ತು ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ತನ್ನ ಪತಿ ಒತ್ತಡ ಹೇರಿದ್ದಾಗಿ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಥಳಿಸಿದ್ದಲ್ಲದೆ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ್ದಾನೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಭೋಪಾಲ್ ನಿವಾಸಿಯಾಗಿದ್ದು, ಆಕೆಯ ಪತಿಯನ್ನು ಮೊಹಮ್ಮದ್ ಅಮ್ಮಾರ್ ಎಂದು ಗುರುತಿಸಲಾಗಿದೆ. ಬಿಕಾನೇರ್‌ನಲ್ಲಿ ಈತ ಹೋಟೆಲ್ ಮ್ಯಾನೇಜರ್ ಎಂದು ಹೇಳಲಾಗಿದ್ದು, ಈತನ ವಿರುದ್ಧ ಭೋಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಪತಿ ಮಾದಕ ವ್ಯಸನಿ ಮತ್ತು ಮದ್ಯವ್ಯಸನಿಯಾಗಿದ್ದು, ಹುಡುಗಿಯರು ಮತ್ತು ಹುಡುಗರೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.