ಮುಂಬೈ ಮೂಲದ ಕಂಪನಿಯೊಂದರ ಸಿಇಒ ಮಾಡಿರೋ ನೇಮಕಾತಿ ನಿರ್ಧಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಒಂದು ಹೈಯರ್ ಲೆವೆಲ್ ಜಾಬ್‌ಗೆ ಸೆಲೆಕ್ಟ್ ಆಗಿದ್ದ ಒಬ್ಬ ಅಭ್ಯರ್ಥಿ, ಕೆಲಸಕ್ಕೆ ಸೇರೋ ಮುಂಚೆ ತನ್ನ ಗಂಡ ಕಂಪನಿಗೆ ಬಂದು ನೋಡಬೇಕು ಅಂತ ಹೇಳಿದ್ರಂತೆ. ಅದಕ್ಕೆ ಸಿಇಒ ಆ ಅಭ್ಯರ್ಥಿನ ಕೆಲಸಕ್ಕೆ ತಗೊಳ್ಳಲ್ಲ ಅಂತ ಹೇಳಿದ್ದಾರೆ.
ನ್ಯಾಚುರಲಿ ಯುವರ್ಸ್‌ನ ಸಿಇಒ ವಿನೋದ್ ಚೆಂದಿಲ್ ಅವರು ಎಕ್ಸ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. “ಇವತ್ತು ಒಂದು ಅಭ್ಯರ್ಥಿ ಜೊತೆ ಮಾತಾಡ್ತಿದ್ದೆ. ಅವ್ರನ್ನ ಸೆಲೆಕ್ಟ್ ಮಾಡಿದ್ಮೇಲೆ ಅವ್ರ ಗಂಡನ ಭೇಟಿ ಮಾಡ್ಬೇಕು ಅಂತ ಹೇಳಿದ್ರು. ಅದಕ್ಕೆ ಅವ್ರನ್ನ ರಿಜೆಕ್ಟ್ ಮಾಡ್ದೆ. ಪಿ.ಎಸ್: ಇದು ಹೈಯರ್ ಲೆವೆಲ್ ಜಾಬ್‌ಗೆ” ಅಂತ ಅವ್ರು ಬರೆದಿದ್ದಾರೆ.
ಈ ಪೋಸ್ಟ್‌ಗೆ ತುಂಬಾ ಜನ ಕಮೆಂಟ್ ಮಾಡಿದ್ದಾರೆ. ಕೆಲವರು ಸಿಇಒ ನಿರ್ಧಾರ ಸರಿ ಅಂತ ಹೇಳಿದ್ರೆ, ಇನ್ನು ಕೆಲವರು ಅಭ್ಯರ್ಥಿ ಪರವಾಗಿ ಮಾತಾಡಿದ್ದಾರೆ. ಫ್ಯಾಮಿಲಿ ವ್ಯಾಲ್ಯೂಸ್‌ಗೆ ರೆಸ್ಪೆಕ್ಟ್ ಕೊಡೋದು ತಪ್ಪಲ್ಲ ಅಂತ ಕೆಲವರು ಹೇಳಿದ್ದಾರೆ.
“ಬೆಂಗಳೂರಿಗೆ ಸೇರ್ತೀನಿ ಅಂತ ಒಪ್ಕೊಂಡಿದ್ದ ದೆಹಲಿಯ ಒಬ್ಬ ಅಭ್ಯರ್ಥಿನ ಸಂದರ್ಶನ ಮಾಡಿದ್ದೆ. ಆದ್ರೆ, ಆಮೇಲೆ ನನ್ನ ಫ್ಯಾಮಿಲಿ ಒಪ್ಕೊಳ್ಳಲ್ಲ ಅಂತ ಹೇಳಿದ್ರು. ನಾವು ಕೂಡಾ ಅವ್ರನ್ನ ರಿಜೆಕ್ಟ್ ಮಾಡ್ದೆ. ವೃತ್ತಿ ನಿರ್ಧಾರಗಳನ್ನ ನಾವೇ ತಗೋಬೇಕು. ಫ್ಯಾಮಿಲಿನ ಸೇರಿಸ್ಕೊಂಡ್ರೆ ಪ್ರಾಬ್ಲಂ ಆಗುತ್ತೆ” ಅಂತ ಒಬ್ಬರು ಚೆಂದಿಲ್ ನಿರ್ಧಾರನ ಸಪೋರ್ಟ್ ಮಾಡಿದ್ದಾರೆ.
ಆದ್ರೆ, ತುಂಬಾ ಜನ ಚೆಂದಿಲ್ ನಿರ್ಧಾರನ ಪ್ರಶ್ನೆ ಮಾಡಿದ್ದಾರೆ. “ಯಾಕೆ ರಿಜೆಕ್ಟ್ ಮಾಡ್ದ್ರಿ?” ಅಂತ ಒಬ್ಬರು ಕೇಳಿದ್ದಾರೆ. ಅದಕ್ಕೆ ಚೆಂದಿಲ್, “ಅವ್ರ ಗಂಡ ಒಪ್ಕೊಂಡ್ರೆ ಮಾತ್ರ ಅವ್ರು ನಮ್ಮ ಕಂಪನಿಗೆ ಸೇರ್ತಾರಂತೆ. ಒಬ್ಬ ಇಂಡಿಪೆಂಡೆಂಟ್ ವುಮೆನ್ ಯಾಕೆ ಹೀಗೆ ಮಾಡ್ತಾರೆ ? ಬೇಸಿಕಲಿ ಅವ್ರ ಗಂಡ ನಮ್ಮನ್ನ ಸಂದರ್ಶನ ಮಾಡಿ ಓಕೆ ಅಂದ್ರೆ ಮಾತ್ರ ಅವ್ರು ಕೆಲಸಕ್ಕೆ ಸೇರ್ತಾರಂತೆ. ಅವ್ರು ಕಂಪ್ಲೀಟ್ ಆಗಿ ಅವ್ರ ಗಂಡನ ಮೇಲೆ ಡಿಪೆಂಡ್ ಆಗಿದ್ದಾರೆ ಅಂತ ಗೊತ್ತಾಗುತ್ತೆ. ಒಂದು ಬೇಸಿಕ್ ನಿರ್ಧಾರ ತಗೊಳ್ಳೋಕೆ ಆಗ್ದೇ ಇರೋರು ಬೇರೆ ನಿರ್ಧಾರಗಳನ್ನ ಹೇಗೆ ತಗೋತಾರೆ ? ಅದು ಇಂಟರ್ನ್ ಅಲ್ಲ, ಹೈಯರ್ ಲೆವೆಲ್ ಜಾಬ್. ರಿಸ್ಕ್ ಜಾಸ್ತಿ” ಅಂತ ಹೇಳಿದ್ದಾರೆ.