
ತಾನು ಇನ್ನೂ ನೋಡದ ಚಿತ್ರವನ್ನು ನೋಡದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಇನ್ನೊಂದು ಮಹಿಳೆಗೆ ಆ ಚಿತ್ರವನ್ನು ವೀಕ್ಷಿಸಲು ಅಡ್ಡಿಪಡಿಸಿದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದೀಗ ವೈರಲ್ ಆಗಿದೆ.
ರೆಡ್ಡಿಟ್‌ನಲ್ಲಿ 22 ವರ್ಷ ವಯಸ್ಸಿನ ಮಹಿಳೆ ತನಗಾಗಿರುವ ಕಹಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಮೊದಲ ಬಾರಿ ಹಾರಾಟದ ಕೆಟ್ಟ ಅನುಭದ ಇದಾಗಿದೆ ಎಂದು ಆಕೆ ಬರೆದುಕೊಂಡಿದ್ದಾಳೆ. ಎರಡು ಗಂಟೆಗಳ ಹಾರಾಟದ ಸಮಯದಲ್ಲಿ ತನ್ನ ಸಮಯವನ್ನು ಕಳೆಯಲು ವಿಮಾನದಲ್ಲಿನ ಇರುವ ಮನರಂಜನಾ ವ್ಯವಸ್ಥೆಯಲ್ಲಿ ‘ಅನ್‌ಚಾರ್ಟೆಡ್’ ಚಲನಚಿತ್ರವನ್ನು ವೀಕ್ಷಿಸಲು ನಿರ್ಧರಿಸಿದ ಮಹಿಳೆ ಅದನ್ನು ನೋಡುತ್ತಿದ್ದಳು. ಆಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆ, ಅದನ್ನು ಆಫ್ ಮಾಡಲು ಹೇಳಿದಳು.
ಏಕೆ ಎಂದು ಈ ಮಹಿಳೆ ಪ್ರಶ್ನಿಸಿದಾಗ ಆ ಮಹಿಳೆ ನಾನು ಚಲನಚಿತ್ರವನ್ನು ನೋಡಿಲ್ಲ, ಅದಕ್ಕಾಗಿ ನೀವು ನೋಡಬೇಡಿ ಎಂದಳು. ನೀವೂ ನೋಡಬಹುದಲ್ಲಾ ಎಂದು ಈ ಮಹಿಳೆ ಕೇಳಿದಾಗ ಆಕೆ ನಾನು ಬೇರೆ ಚಿತ್ರ ನೋಡುತ್ತಿದ್ದೇನೆ. ಅದು ಮುಗಿದ ಮೇಲೆ ಇದನ್ನು ನೋಡುತ್ತೇನೆ ಎಂದು ತಗಾದೆ ತೆಗೆದು ಕೊನೆಗೂ ನನ್ನ ಚಿತ್ರವನ್ನು ಸ್ವಿಚ್ ಆಫ್ ಮಾಡಿಸಿದಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂಥ ವಿಚಿತ್ರ ಜನರೂ ಇರುತ್ತಾರೆಯೇ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ.