
ಈ ಡಿಜಿಟಲ್ ಯುಗದಲ್ಲಿ ಚಾಟ್ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಶುರುವಾಗಿರುವ ಈ ಆ್ಯಪ್ ಕೋಲಾಹಲವನ್ನೇ ಸೃಷ್ಟಿಸಿದೆ.
ಈಗ, ಮಹಿಳೆಯೊಬ್ಬರು ತಮ್ಮ ವಿಮಾನವು ಆರು ಗಂಟೆಗಳ ಕಾಲ ವಿಳಂಬವಾದ ನಂತರ ಏರ್‌ಲೈನ್‌ಗೆ ಇಮೇಲ್ ಬರೆಯಲು ಚಾಟ್‌ಜಿಪಿಟಿಯನ್ನು ಕೇಳಿಕೊಂಡಿದ್ದರು. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಚೆರಿ ಲುವೊ ಅವರು ಚಾಟ್‌ಬಾಟ್‌ನಿಂದ ರಚಿಸಲಾದ ತ್ವರಿತ ಇಮೇಲ್ ಅನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ವಿಮಾನಯಾನ ಸಂಸ್ಥೆಗೆ ಸಭ್ಯ ರೀತಿಯಲ್ಲಿ ಆದರೆ ಅವರಿಗೆ ಬುದ್ಧಿ ಬರುವಂಥ ಇ-ಮೇಲ್ ಒಂದನ್ನು ಬರೆಯಿರಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.
ನಂತರ ಚಾಟ್ಜಿಪಿಟಿ ಇ-ಮೇಲ್ ಬರೆದು ಅದನ್ನು ವಿಮಾನಯಾನ ಸಂಸ್ಥೆಗೆ ಕಳುಹಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ನನ್ನ ವಿಮಾನವು 6 ಗಂಟೆಗಳಷ್ಟು ವಿಳಂಬವಾಯಿತು. ಅವರ ವೇಯ್ಟ್‌ಲಿಸ್ಟ್‌ನಲ್ಲಿ ನಾವು 3 ಗಂಟೆಗಳ ಕಾಲ ಕಾಯುತ್ತಿದ್ದರೂ ಪಾಸ್ ಲಾಂಜ್ನಲ್ಲಿ ನಮ್ಮನ್ನು ಪ್ರವೇಶಿಸಲು ಬಿಡಲಿಲ್ಲ. ಈ ಹಿನ್ನೆಲೆಯಲ್ಲಿ ಹತಾಶೆಯಿಂದ ಚಾಟ್ಜಿಪಿಟಿ ನೆರವು ಪಡೆದಿರುವುದಾಗಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.