ಆಗ ತಾನೇ ಜನಿಸಿದ ಮಗುವೊಂದನ್ನು ಆಸ್ಪತ್ರೆಯಿಂದ ಅಪಹರಿಸಿದ ಮಹಿಳೆಯೊಬ್ಬಳನ್ನು ತಮಿಳು ನಾಡಿನ ತಂಜಾವೂರು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 5ರಂದು ರಾಜಲಕ್ಷ್ಮಿ ಎಂಬಾಕೆ ಹೆಣ್ಣು ಮಗವಿಗೆ ಜನ್ಮ ನೀಡಿದ್ದಾರೆ. ಹೆತ್ತವರ ವಿರೋಧದ ನಡುವೆ ಮದುವೆ ಮಾಡಿಕೊಂಡ ಗುಣಶೇಖರನ್ ಹಾಗೂ ರಾಜಲಕ್ಷ್ಮಿಗೆ ಮಗುವಿನ ಹೆರಿಗೆಯಾದ ವೇಳೆ ಆಸ್ಪತ್ರೆಯಲ್ಲಿ ನೋಡಲು ಯಾರೊಬ್ಬರೂ ಇರಲಿಲ್ಲ.
SHOCKING NEWS: ವಾಕಿಂಗ್ ಹೋಗಿದ್ದ 7 ಮಕ್ಕಳು ನಾಪತ್ತೆ
ತಾನೂ ಸಹ ಗರ್ಭಿಣಿಯಾದ ಕಾರಣ ಆಸ್ಪತ್ರೆಗೆ ಚೆಕಪ್‌ಗಾಗಿ ಹೋಗಿದ್ದ ವಿಜಿ ಎಂಬಾಕೆ ರಾಜಲಕ್ಷ್ಮಿ ದಂಪತಿಗೆ ಕೆಲವೊಂದು ಸಹಾಯಗಳನ್ನೂ ಮಾಡಿದ್ದಳು.
ಶನಿವಾರ ಬೆಳಿಗ್ಗೆ ಎದ್ದ ರಾಜಲಕ್ಷ್ಮಿಗೆ ತನ್ನ ಮಗು ಕಾಣೆಯಾಗಿದೆ ಎಂದು ತಿಳಿದು ಬಂದಿದ್ದು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ಮಗುವಿನ ಪತ್ತೆಗೆ ಮುಂದಾಗಿದ್ದಾರೆ. ಆಗ ವಿಜಿಯೇ ಮಗುವನ್ನು ಅಪಹರಿಸಿದ್ದು ತಿಳಿದು ಬಂದಿದೆ. ಮಗುವನ್ನು ಬಟ್ಟೆಯೊಂದರಲ್ಲಿ ಸುತ್ತಿಕೊಂಡು ವಿಜಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಗ್ರಾಹಕರಿಗೆ ಗುಡ್ ನ್ಯೂಸ್: ದರ ಇಳಿಕೆ ಸಾಧ್ಯತೆ
ಸಿಸಿ ಟಿವಿ ಫುಟೇಜ್‌ಗಳನ್ನು ವಿಶ್ಲೇಷಿಸಿದ ವೇಳೆ ವಿಜಿ ಮೆಡಿಕಲ್ ಅಂಗಡಿಯೊಂದರಲ್ಲಿ ಡೈಪರ್‌ಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಪತ್ತೆ ಮಾಡಿದ ಪೊಲೀಸರು ಮಗುವನ್ನು ರಕ್ಷಿಸಿ, ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.